ಬಸವರಾಜ ಕರೇಗಾರ
ಶಹಾಪುರ :
ಅಖಂಡ ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿರುವುದು ದಕ್ಷಿಣ ಕರ್ನಾಟಕದವರೇ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಲವರು ದಕ್ಷಿಣ ಕರ್ನಾಟಕದವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷ ಮುನ್ನಡೆ ಕಾಯ್ದುಕೊಂಡು ಬರುತ್ತಿದೆ. ಲೋಕಸಭೆ ಅಥವಾ ವಿಧಾನಸಭೆಯಾಗಿರಬಹುದು ಎರಡನ್ನೂ ಕರ್ನಾಟಕ ಕಲ್ಯಾಣ ಕರ್ನಾಟಕವೇ ಮುಂದು. ಆದರೆ ರಾಜ್ಯದ ಉನ್ನತ ಸ್ಥಾನ ಮುಖ್ಯಮಂತ್ರಿ ಹುದ್ದೆ ಯಾಕಿಲ್ಲ ಎನ್ನುವ ಪ್ರಶ್ನೆ ಈ ಭಾಗದ ಜನರಿಗೆ ಬಲವಾಗಿ ಕಾಡುತ್ತಿದೆ.
60 ವರ್ಷಕ್ಕೂ ಹೆಚ್ಚು ಕಾಲ ಸೋಲಿಲ್ಲದ ನಾಯಕನೆಂದು ಹೆಸರು ಪಡೆದ ಮಲ್ಲಿಕಾರ್ಜುನ ಖರ್ಗೆ ರವರು ವಿಧಾನಸೌಧದ ಮೆಟ್ಟಿಲು ಹತ್ತಿ ಸಚಿವರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದಾರೆ. ರಾಜ್ಯದಲ್ಲಿಯೇ ಅವರ ವರ್ಚಸ್ಸಿದೆ. ಪಕ್ಷಕ್ಕಾಗಿ ಏನೆಲ್ಲಾ ತ್ಯಾಗ ಮಾಡಿದ್ದಾರೆ. ಹಲವರ ಗೆಲುವಿಗಾಗಿ ಶ್ರಮಿಸಿದ್ದಾರೆ.
ಆದರೆ ಮುಖ್ಯಮಂತ್ರಿ ಯಾಕಾಗಿಲ್ಲ ಎನ್ನುವ ಪ್ರಶ್ನೆ ಈ ಭಾಗದ ಜನರಿಗೆ ಕಾಡುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ರಾಯಚೂರು ಬಳ್ಳಾರಿ ಕಲಬುರ್ಗಿ ಬೀದರ್ ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಬಿಜೆಪಿ ಸೊನ್ನೆ ಸುತ್ತಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂಬತ್ತು ಸ್ಥಾನ. ಅದರಲ್ಲಿ ಐದು ಸ್ಥಾನ ಕಲ್ಯಾಣ ಕರ್ನಾಟಕದಲ್ಲಿ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈಸೂರು ಬೆಂಗಳೂರು ಬೆಳಗಾವಿ ಬಾಗಲಕೋಟೆ ಬಿಜಾಪುರ ಸೇರಿದಂತೆ 17 ಸ್ಥಾನ ಬಿಜೆಪಿಯ ಪಾಲಾಗಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಮುಖ್ಯಮಂತ್ರಿ ಉಪಮುಖ್ಯಮಂತ್ರಿಯವರು ಸಚಿವರು ಸಾಧನೆ ಏನು! ಗ್ಯಾರಂಟಿಗಳನ್ನು ಪಕ್ಷದ ಮುನ್ನಡೆ ಸಾಧಿಸಲಿಲ್ಲವೇ! ಮುಖ್ಯಮಂತ್ರಿಗಳು ತಮ್ಮ ಸ್ವಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಉಪಮುಖ್ಯಮಂತ್ರಿಗಳು ತಮ್ಮನನ್ನು ಗೆಲ್ಲಿಸಲಿಲ್ಲ. ಬೆಂಗಳೂರಿನಲ್ಲಿ ಘಟಾನುಘಟಿ ಸಚಿವರು ಇದ್ದರೂ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ.
ಹಾಗಾದರೆ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ 5 ಕ್ಷೇತ್ರದಲ್ಲಿ ಜಯ ಕಂಡಿದೆ. ಇದು ಒಬ್ಬ ನಾಯಕನ ಸಾಮರ್ಥ್ಯವೆಂದು ಬಿಂಬಿಸುತ್ತದೆ.ಕಲ್ಯಾಣ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗುವ ಸಮರ್ಥನಾಯಕರಿಲ್ಲವೇ!
ಖರ್ಗೆ ಕುಟುಂಬ ಪಕ್ಷಕ್ಕಾಗಿ ತ್ಯಾಗ ಮಾಡಿದೆ. ಆ ಕುಟುಂಬಕ್ಕೆ ಮುಖ್ಯಮಂತ್ರಿ ಸ್ಥಾನ ಯಾಕೆ ಕೊಡಬಾರದು ಎನ್ನುವ ಪ್ರಶ್ನೆ ಕಲ್ಯಾಣ ಕರ್ನಾಟಕದ ಜನರಲ್ಲಿ ಕಾಡುತ್ತಿದೆ.