ಅಮರೇಗೌಡ ಬಯ್ಯಾಪೂರ ಕಾಲೇಜಿನ ವಿದ್ಯರ‍್ಥಿಗಳಿಗೆ ಬಿಳ್ಕೋಡಿಗೆ,ಹಾಗೂ ಸ್ವಾಗತ ಕರ‍್ಯಕ್ರಮ, ವಿಧ್ಯರ‍್ಥಿಗಳು ನವ ರಾಷ್ಟ್ರ ನರ‍್ಮಾಣದ ಶಿಲ್ಪಿಗಳಾಗಬೇಕು – ಹೇಮರಡ್ಡಿ

Eshanya Times

ಸಿರವಾರ,ಅ.೧೦ : ವಿಧ್ಯರ‍್ಥಿಗಳು ವಿಧ್ಯಾಭ್ಯಾಸದ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು.ಶಿಕ್ಷಣವು ಒಂದು ಆಯುಧ ಇದ್ದಂತೆ ಬಡತನವನ್ನು ಮೆಟ್ಟಿ ನಿಲ್ಲುವ ಶಕ್ತಿಯಾಗಿದೆ. ವಿಧ್ಯರ‍್ಥಿಗಳ ಕಠಿಣ ಪರಿಶ್ರಮದಿಂದ ಗೆಲುವನ್ನು ಸಾಧಿಸಲು ಸಾಧ್ಯ ವಿಧ್ಯರ‍್ಥಿಗಳು ಈ ದೇಶದ ನವ ರಾಷ್ಟ್ರ ನರ‍್ಮಾಣದ ಶಿಲ್ಪಿಗಳಾಗಬೇಕು ಎಂದು ರಾಯಚೂರು ವೀರಶೈವ ವೃತ್ತಿ ಪರ ಕಾಲೇಜ್ ಉಪನ್ಯಾಸಕ ಹೇಮರಡ್ಡಿ ಹೇಳಿದರು.

ಪಟ್ಟಣದ ಶ್ರೀ ಅಮರೇಗೌಡ ಬಯ್ಯಪೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಹಾಗೂ ಪ್ರಥಮ ರ‍್ಷದ ಪದವಿ ವಿಧ್ಯರ‍್ಥಿಗಳಿಗೆ ಸ್ವಾಗತ ಹಾಗೂ ಪದವಿ ಅಂತಿಮ ರ‍್ಷದ ವಿಧ್ಯರ‍್ಥಿಗಳಿಗೆ ಬೀಳ್ಕೊಡುಗೆ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವ ಜೀವನ ಅತ್ಯಂತ ಅಮೂಲ್ಯವಾದ ಘಟ್ಟ ಎಂದರೆ, ವಿಧ್ಯರ‍್ಥಿ ಜೀವನದ ಘಟ್ಟ. ವಿಧ್ಯರ‍್ಥಿಗಳು ಉನ್ನತ ಸಮಾಜವನ್ನು ಕಟ್ಟುವ ಶಿಲ್ಪಿಗಳು. ಗುರುಗಳು ಹಾಗೂ ತಂದೆ – ತಾಯಿಗಳನ್ನು ಗೌರವಿಸಬೇಕು ಅಂದಾಗ ಮಾತ್ರ ನಮ್ಮ ಬದುಕಿಗೆ ರ‍್ಥ ಸಿಗುತ್ತದೆ. ಅತ್ಯಂತ ಮಾನವೀಯ ಮೌಲ್ಯಗಳನ್ನು ಹೊಂದಿರುವ ತಂದೆ – ತಾಯಿ ನಮ್ಮ ಜೀವನದ ವ್ಯಕ್ತಿಗಳು ಅವರನ್ನು ಗೌರವಿಸಿ ಬಾಳಬೇಕು.ವಿಧ್ಯರ‍್ಥಿಗಳು ಸತತ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಇವತ್ತಿನ ದಿನ ವಿಶ್ವದ ಜ್ಞಾನದ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿ, ಸಂವಿಧಾನ ಭಾರತ ದೇಶಕ್ಕೆ ನೀಡಿದ್ದಾರೆ. ಅಂತಹ ಮಹಾನ್ ನಾಯಕರುಗಳ ಗುಣಗಳನ್ನು ಮೈಗೊಡಿಸಿಕೊಂಡು ವಿಧ್ಯರ‍್ಥಿಗಳು ನಡೆಯಬೇಕು.ವಿಧ್ಯರ‍್ಥಿಗಳು ಪುಸ್ತಕಗಳನ್ನು ಪ್ರೀತಿಸಬೇಕು.ಸಮಾಜವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯುವ ವ್ಯಕ್ತಿಗಳಾಗಿ ಬೆಳೆದು ನಿಲ್ಲಬೇಕು ಎಂದರು.
ನಂತರ ರಾಜ್ಯಶಾಸ್ತ್ರ ವಿಭಾಗದಲ್ಲಿ ಗುಲ್ರ‍್ಗಾ ವಿಶ್ವವಿದ್ಯಾಲಯದ ೨೦೨೨-೨೩ ನೇ ಸಾಲಿನ ಬಿ.ಎ. ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಮತ್ತು ಬಂಗಾರ ಪದಕವನ್ನು ಮುಡಿಗೇರಿಸಿಕೊಂಡ ವಿಧ್ಯರ‍್ಥಿ ನಿಂಗಮ್ಮ ತಂದೆ ಬಸವರಾಜ ಅತ್ತನೂರು ಈ ವಿಧ್ಯರ‍್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.ಅತಿ ಹೆಚ್ಚು ಅಂಕಗಳನ್ನು ಪಡೆದು ವಿಧ್ಯರ‍್ಥಿಗಳನ್ನು ಹಾಗೂ ಕರ‍್ಯಕ್ರಮದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂರ‍್ಭದಲ್ಲಿ ಪ್ರಾಂಶುಪಾಲ ಅಮರೇಶ ನಂದರಡ್ಡಿ,ತಾಂತ್ರಿಕ ಕಾಲೇಜ ಪ್ರಾಂಶುಪಾಲ ಸೂಗೂರೇಶ, ಜಾವೀದ್ ಬಡೇಗಾರ, ಸರಕಾರಿ ಪ್ರಥಮ ರ‍್ಜೆ ಕಾಲೇಜ ಉಪನ್ಯಾಸಕ ಲಕ್ಷ್ಮಣ ಯಾದವ್, ಶಾರದಾ ಕಂಪ್ಯೂಟರ್ ಶಿಕ್ಷಕ ತಿರುಮಲ ರಾವ್ ಕುಲರ‍್ಣಿ,ನವಲಕಲ್ ಸಹ ಶಿಕ್ಷಕ ಯಲ್ಲಪ್ಪ, ಕಾಲೇಜಿನ ಉಪನ್ಯಾಸಕರಾದ ಫಕ್ರುದ್ದೀನ್,ಪ್ರವೀಣ ಕುಮಾರ್, ಶಿವುಕುಮಾರ, ಬಸವರಾಜ ಹೂಗಾರ, ಎಂ.ಯಲ್ಲಪ್ಪ, ಹುಲಿಗೆಪ್ಪ, ದುರುಗಣ್ಣ, ವಿಜಯಕುಮಾರ್, ನರಸಪ್ಪ, ಶಿವುರಾಜ, ಚಂದುಮತಿ ಸೇರಿದಂತೆ ಅನೇಕ ವಿಧ್ಯರ‍್ಥಿಗಳು ಇದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";