ರಾಯಚೂರು,ಸೆ.9: ನಗರದ ವಾರ್ಡ ನಂ.28ರಲ್ಲಿ ರಸ್ತೆ,ಚರಂಡಿ ಕುಡಿಯುವ ನೀರು ಸೇರಿದಂತೆ ಇನ್ನೀತರ ಮೂಲಭೂತ ಸೌಕರ್ಯಗಳು ಒದಗಿಸಬೇಕೆಂದು ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ವಾರ್ಡ ನಂ.28ರ ಹೊಸ ಆಶ್ರಯ ಕಾಲೋನಿ ಹಾಗೂ ಹಳೆ ಆಶ್ರಯ ಕಾಲೋನಿಗಳಲ್ಲಿ ಚರಂಡಿ ಇಲ್ಲದೇ ಇರುವುದರಿಮದ ಮಳೆಯ ನೀರು ರಸ್ತೆಗೆ ಬಂದು ರಸ್ತೆ ಕೆಸರುಗದ್ದೆಯಂತಾಗಿದೆ. ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಅಲ್ಲದೇ ನಿಂತ ನೀರಿನಲ್ಲಿ ಸೊಳೆಗಳು ಉತ್ಪಾತಿಯಾಗವುದಲ್ಲದೇ ಅನೇಕ ಸಾಂಕ್ರಮಿಕ ರೋಗಗಳಿಗೆ ಕಾರಣವಾಗಲಿದೆ.
ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದೇ ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಪಕ್ಕದಲ್ಲಿ ಜಾಲಿ ಗಿಡಗಳು ಬೆಳದು ನಿಂತಿದ್ದು, ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಜಗ್ಗಲ ಕಟ್ಟಿಂಗ್ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಬಡಾವಣೆಯಲ್ಲಿ ಶೌಚಾಲಯವಿಲ್ಲದೇ ಮಹಿಳೆಯರು ಬಹಿರ್ದೇಶೆಗೆ ಗುಡ್ಡದ ಕಡೆಗೆ ತೆರಳುತ್ತಿದ್ದಾರೆ. ಮಳೆ ಮತ್ತು ರಾತ್ರಿವೇಳೆಯಲ್ಲಿ ವಿಷಜಂತುಗಳ ಕಡಿತಕ್ಕೆ ಒಳಗಾಗಿ ಭಯಭೀತರಾಗಿದ್ದಾರೆ. ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಚಂದ್ರಬ0ಡಾ ರಸ್ತೆಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಗರ ಸಂಯೋಜಕ ಅನ್ವರ್, ಜಲಾಲ್, ಶೇಕ್ ಅಲಿ, ಅನ್ವರ್,ಹನುಂತ, ಹಸೇನ್, ಸರ್ತಾಚ್, ಆಲ್ತಾಫ್, ಶಾಲಂ, ಅಸ್ಲಂ, ಶಂಶು, ಮಹಮದ್ ಖಾಜಾ, ಜಮೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.