ರಾಯಚೂರು: ಮೇ-4:
ಪಕ್ಷ ಮತ್ತು ನಾಯಕರನ್ನು ಮುಜುಗರವಾಗುವಂತಹ ಹೇಳಿಕೆಯನ್ನು ಬಶೀರುದ್ದೀನ್ ಅವರು ನೀಡಿದ್ದು, ಇದರ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಬಶೀರುದ್ದೀನ್ ಅವರನ್ನು ಪಕ್ಷ ದಿಂದ ಅಮಾನತ್ತು ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಇಂತಹ ಅನಗತ್ಯ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು, ಈ ಕಾರಣಕ್ಕಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷ ದಿಂದ ಅಮಾನತ್ತು ಮಾಡಿ, ೭ ದಿನಗಳೊಳಗಾಗಿ ಈ ಹೇಳಿಕೆಗಳ ಬಗ್ಗೆ ವಿವರಣೆಯನ್ನು ಕೆಪಿಸಿಸಿ ಕಳುಹಿಸಿಕೊಂಡಬೇಕೆAದು ಹಾಗೂ ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಬಶೀರುದ್ದೀನ್ ಹೇಳಿಕೆ: ಪೊಲೀಸ್ ಇಲಾಖೆ ಸ್ಪಷ್ಟೀಕರಣ ವಿಡಿಯೋ ಕೂಲಂಕುಶವಾಗಿ ಪರಿಶೀಲನೆ: ಹೇಳಿಕೆ ನೀಡಿದ್ದು ಕಂಡು ಬಂದಿಲ್ಲ-ಎಸ್.ಪಿ.
ರಾಯಚೂರು: ಮೇ-4:
ಜಿ.ಪಂ.ಮಾಜಿ ಸದಸ್ಯ ಬಶೀರುದ್ದೀನ್ ಅವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರೆ, ಪೊಲೀಸರು ಬೂಟ್‌ನಿಂದ ಹೊಡದು ಒಳಗೆ ಹಾಕಬೇಕು ಎಂದು ಹೇಳಿರುವ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಕೂಲಂಕುಶವಾಗಿ ಪರಿಶೀಲಿಸಿದಾಗ ಈ ರೀತಿ ಹೇಳಿರುವುದು ಕಂಡು ಬಂದಿರುವುದಿಲ್ಲವೆAದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಈ ವಿಡಿಯೋ ದಿ.೩೦-೧೧-೨೦೨೩ರಂದು ಚಿತ್ರೀಕರಣವಾದ ಘಟನೆ ಆಗಿರುತ್ತದೆ. ಹರಿದಾಡುತ್ತಿರುವ ವಿಡಿಯೋ ಪೂರ್ತಿ ಘಟನೆಯ ವೀಡಿಯೋ ಆಗಿರದೆ, ಕೇವಲ ಘಟನೆಯ ತುಣುಕುಗಳು ಆಗಿರುತ್ತವೆ. ಆದರಿಂದ ಸಾರ್ವಜನಿಕರು ಈ ವಿಷಯದಲ್ಲಿ ಸಾಮರಸ್ಯ ಕಾಪಾಡಬೇಕೆಂದು ಅವರು ಕೋರಿದ್ದಾರೆ.