ಮಾನ್ವಿ: ತಾಲ್ಲೂಕಿನ ಮದ್ಲಾಪುರು ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕ ಪಂಚಾಯತಿ ಕಾರ್ಯಾಲಯಕ್ಕೆ ರಾಯಚೂರು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ರವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಮದ್ಲಾಪೂರು ಗ್ರಾಮ ಪಂಚಾಯತಿಯ ಚೀಕಲಪರ್ವಿ ಗ್ರಾಮದ ಜನತಾ ಕಾಲೋನಿಯಲ್ಲಿ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪವಿಭಾಗ ಮಾನವಿ ಇಲಾಖೆಯ ಕೆ.ಕೆ.ಆರ್.ಡಿ.ಬಿ ಯಡಿ ನಿರ್ಮಿಸಿರುವ 2 ಹೆಚ್ಚುವರಿ ಶಾಲಾ ಕೊಠಡಿಗಳ ಕಾಮಗಾರಿ ಪರಿಶೀಲನೆ ಮಾಡಿ ಪೂರ್ಣಗೊಂಡಿರುವ ಶಾಲಾ ಕೊಠಡಿಗಳನ್ನು ಕೂಡಲೇ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರ ಮಾಡಲು ಸೂಚಿಸಲಾಯಿತು.
ಶಾಲಾ ಆವರಣದಲ್ಲಿ ನರೇಗಾ ಅಡಿ ನಿರ್ಮಿಸಿರುವ ಅಡುಗೆ ಕೋಣೆಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರವರಿಗೆ ಸೂಚಿಸಲಾಯಿತು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ನಂತರ ಆಯುಷ್ಮಾನ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಬಗ್ಗೆ ಸಿಎಚ್ಒ ರವರೊಂದಿಗೆ ಸಂವಾದ ಮಾಡಿದರು.
ಆಯುರ್ವೇದ ಆಸ್ಪತ್ರೆ ಕಟ್ಟಡ ಕಾಮಗಾರಿಯ ನಿವೇಶನ ಪರಿಶೀಲಿಸಿ ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಟ್ಟೆ ನಿರ್ಮಾಣ ಕೈಗೊಳ್ಳಲು ಸೂಚಿಸಲಾಯಿತು. ನಂತರ ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಕುಡಿಯುವ ನೀರಿನ ಬಗ್ಗೆ ಚರ್ಚೆ ಮಾಡಿ ಪಿಡಿಒ ದೇವಪ್ಪ ಮರಡಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ನಂತರ ಸ.ಹಿ.ಪ್ರಾ. ಶಾಲೆಯ ಆವರಣದಲ್ಲಿನ ಭೊಜನಾಲಯ ಕಾಮಗಾರಿ ಪರಿಶೀಲನೆ ಮಾಡಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಅಭ್ಯಾಸ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಿಸಲಾಯಿತು. ತದನಂತರ ತಾಲ್ಲೂಕು ಪಂಚಾಯತ ಹೊಸ ಕಟ್ಟಡ ಕಾರ್ಯಾಲಯದ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ಜೊತೆಗೆ ನರೇಗಾ ವಿಭಾಗಕ್ಕೆ ತೆರಳಿ ಕಾಲಮಿತಿಯಲ್ಲಿ ಗ್ರಾಮೀಣ ಕೂಲಿಕಾರ್ಮಿಕರಿಗೆ ಕೂಲಿ ಪಾವತಿಯಾಗಬೇಕೆಂದು ತಿಳಿಸಿದರು. ನಂತರ ತಾಲ್ಲೂಕು ಪಂಚಾಯತ ಕಛೇರಿ ಮೇಲಿನ ಸಭಾಂಗಣಕ್ಕೆ ಭೇಟಿ ನೀಡಿ ವಿಕ್ಷೀಸಿದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹಮದ್, ಪಂಚಾಯತ್ ರಾಜ್ ಉಪ ವಿಭಾಗದ ಎಇಇ ಚೌವಣ್ , ಸಹಾಯಕ ನಿರ್ದೇಶಕರು ದೀಪಾ ಅರಳಿಕಟ್ಟಿ, ಪಿಡಿಓ ವೆಂಕಟೇಶ ಹಾಗೂ ತಾಲ್ಲೂಕು ಪಂಚಾಯತ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.