ಸಿರುಗುಪ್ಪ.ಅ.30: ನವೆಂಬರ್ ೧೧ರಂದು ನಡೆಯಲಿರುವಬ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಣೆ ಮಾಡಲು ಎಲ್ಲಾ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಗ್ರೇಡ್-೨ ತಹಶೀಲ್ದಾರ್ ಸತ್ಯಮ್ಮ ತಿಳಿಸಿದರು.
ನಗರದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಯಂತಿ ಅಂಗವಾಗಿ ಓಬವ್ವನ ಭಾವಚಿತ್ರದ ಮೆರವಣಿಗೆ ತಾಲೂಕು ಕ್ರೀಡಾಂಗಣದಿAದ ನಗರದ ನೇತಾಜಿ ವ್ಯಾಯಾಮಶಾಲೆ ಆವರಣದಲ್ಲಿ ನಡೆಯಲಿದ್ದು, ವೇದಿಕೆ ಕಾರ್ಯಕ್ರಮ ನೇತಾಜಿ ವ್ಯಾಯಾಮಶಾಲೆ ಆವರಣದಲ್ಲಿ ನಡೆಯಲಿದ್ದು, ಶಾಸಕ ಬಿ.ಎಂ.ನಾಗರಾಜ ಸೇರಿದಂತೆ ನಗರಸಭೆ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸವನ್ನು ಸುಗ್ಗೆನಹಳ್ಳಿ ರಮೇಶ್ ನೀಡಲಿದ್ದಾರೆ, ಆದ್ದರಿಂದ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಚಲುವಾದಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳಲ್ಲಿ ಓಬವ್ವನ ಜಯಂತಿಯನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಸಿದ್ದಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಧಿಲಿಂಗಪ್ಪ, ಚಲವಾದಿ ಮಹಾಸಭಾ ತಾಲೂಕು ಸಮಿತಿ ಅಧ್ಯಕ್ಷ ಬಿ.ಸಣ್ಣ ರಾಮಯ್ಯ, ಯುವ ಸಮಿತಿ ಅಧ್ಯಕ್ಷ ಎಚ್.ಗಣೇಶ, ಪ್ರಧಾನ ಕಾರ್ಯಧರ್ಶಿ ಶಿವರಾಮ, ಮುಖಂಡರಾದ ಬಸವರಾಜ, ಲಕ್ಷ್ಮಣ, ಒಂಕರಪ್ಲ, ಯಲ್ಲಪ್ಪ, ಚಿದಾನಂದ, ಹನುಮಂತ, ರಮೇಶ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.