ಬೀದರ. ಅ. 17 ಜನವಾಡ್ : ಜಿಲ್ಲೆ ಬೀದರ್‌ನಲ್ಲಿ ಐಎಸ್‍ಐ ಆಸ್ಪತ್ರೆ ಸ್ಥಾಪಿಸಬೇಕು ಎಂದು ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕೇಂದ್ರ ರ‍್ಕಾರವನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಕೇಂದ್ರ ಕರ‍್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
‘ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿ ಇರುವ ಜಿಲ್ಲೆಯಲ್ಲಿ ಕರ‍್ಮಿಕರ ಸಂಖ್ಯೆ ಗಣನೀಯವಾಗಿದೆ. ಬೀದರ್ ಹೊರವಲಯದ ಕೊಳಾರ (ಕೆ) ಹಾಗೂ ಹುಮನಾಬಾದ್‍ನ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೂರಾರು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕರ‍್ಖಾನೆಗಳು ಇವೆ. ಇಲ್ಲಿ ಸಾವಿರಾರು ಕರ‍್ಮಿಕರು ಕೆಲಸ ಮಾಡುತ್ತಿದ್ದಾರೆ. ಕರ‍್ಮಿಕರಿಗೆ ಅನಾರೋಗ್ಯ ಉಂಟಾದರೆ ಬೇರೆ ಬೇರೆ ನಗರಗಳ ಇಎಸ್‍ಐ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ’ ಎಂದು ಸಚಿವದ್ವಯರ ಗಮನ ಸೆಳೆದರು.
‘ಬೇರೆಡೆ ಚಿಕಿತ್ಸೆಗೆ ಹೋಗುವಾಗ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಗೆ ಕರೆದೊಯ್ಯಲು ಹೆಚ್ಚಿನ ರ‍್ಚು ಬರುತ್ತಿದೆ. ಇದರಿಂದ ಅಲ್ಪ ವೇತನದಲ್ಲಿ ದುಡಿಯುತ್ತಿರುವ ಕರ‍್ಮಿಕರು ರ‍್ಥಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ’ ಎಂದು ತಿಳಿಸಿದರು.
‘ಜಿಲ್ಲೆಗೆ ಉತ್ತಮ ರೈಲು, ರಾಷ್ಟ್ರೀಯ ಹೆದ್ದಾರಿ ಸಂರ‍್ಕ ಇದೆ. ವಾಯುಪಡೆ ತರಬೇತಿ ಕೇಂದ್ರ, ನಾಗರಿಕ ವಿಮಾನ ನಿಲ್ದಾಣವೂ ಇದೆ. ಬರುವ ದಿನಗಳಲ್ಲಿ ಉದ್ಯಮಿಗಳು ಜಿಲ್ಲೆಯಲ್ಲಿ ಬಂಡವಾಳ ಹೂಡುವ ಸಾಧ್ಯತೆಗಳಿದ್ದು, ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿ ಸಾವಿರಾರು ಕರ‍್ಮಿಕರಿಗೆ ಉದ್ಯೋಗ ಸಿಗಬಹುದಾಗಿದೆ. ಹೀಗಾಗಿ ಸುಸಜ್ಜಿತ ಇಎಸ್‍ಐ ಆಸ್ಪತ್ರೆ ಸ್ಥಾಪಿಸಿ ಗಡಿ ಭಾಗದ ಕರ‍್ಮಿಕರ ಹಿತ ರಕ್ಷಿಸಬೇಕು’ ಎಂದು ಬೇಡಿಕೆ ಮಂಡಿಸಿದರು.
‘ಕೇಂದ್ರ ಸಚಿವದ್ವಯರು ಇಎಸ್‍ಐ ಆಸ್ಪತ್ರೆ ಸ್ಥಾಪನೆ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಸ್ಪತ್ರೆ ಸ್ಥಾಪನೆ ಕರ‍್ಯಸಾಧ್ಯತೆ ಕುರಿತು ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಡಾ.ಬೆಲ್ದಾಳೆ ತಿಳಿಸಿದ್ದಾರೆ.