ರಾಯಚೂರು,ಜೂ.15: ನಗರದ ವಾರ್ಡ ನಂ.29ರಲ್ಲಿರುವ ಅಲ್ಲಮ ಪ್ರಭು ಕಾಲೋನಿ ಶಾಲಾ ಅವರಣದಲ್ಲಿ ಮಳೆಯಿಮದ ನೀರು ಜಲಾವೃತ್ತವಾಗುತ್ತಿದ್ದು, ಕೂಡಲೇ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ,ಶಾಲೆಯಲ್ಲಿ 386 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲಾ ಅವರಣಕ್ಕೆ ನೀರು ನುಗ್ಗಿ ತಗ್ಗು ಪ್ರದೇಶವಾಗಿರುವುದರಿಂದ ನೀರು ಸಂಗ್ರಹವಾಗಿ ಶಾಲಾ ಮಕ್ಕಳು, ಶಿಕ್ಷಕರು ಶಾಲೆಯೊಳಗೆ ತೆರಳದಂತಾಗಿದೆ. ಮಳೆ ಬಂದರೆ ಪ್ರಾರ್ಥನೆ, ಆಟೋಟಗಳು ನಡೆಸದಂತಾಗುತ್ತಿದೆ. ಶಾಲ ಎಸ್‌ಡಿಎಂಸಿಯಿOದ ಈಗಾಗಲೇ ಎರಡು ಬಾರಿ ಸಂಬOಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ. ಶಾಲಾ ಅವರಣಲ್ಲಿ ಮರಂ ಹಾಕವು ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆOದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಖಲೀಲ್ ಪಾಷಾ, ಕ.ಕ.ರೈ ಸಂಘದ ಅಧ್ಯಕ್ಷ ಕೆ.ರಂಗನಾಥ, ರಾಚಯ್ಯ ಸ್ವಾಮಿ, ಮಹಿಬೂಬ, ಜಾಫರ್, ಮುನ್ನಾನ್, ಮರಲಿಂಗ, ಚಂದ್ರು, ಬಡೇಸಾ, ಫಾರೂಕ್, ಶಾಹೇರ, ಜಾಕೀರ್,ಖದೀರ್, ಸುದಶ್ನ, ಪಾಂಡುರOಗ, ಈರಣ್ಣ, ಮನ್ನಸೂರು,ಹುಸೇನ್, ಬಾಬು, ನಿಸಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.