ಅಫಜಲಪುರ:ಸರ‍್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ರ‍್ಥಿ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕರ‍್ಯರ‍್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕರ‍್ಯರ‍್ತರು ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷವಾಕ್ಯ ಕೂಗುತ್ತಾ ಸಂಭ್ರಮಿಸಿದರು.
ಕೆಪಿಸಿಸಿ ಹಿಂದುಳಿದ ರ‍್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಮಾತನಾಡಿ,ಕಾಂಗ್ರೆಸ್ ಪಕ್ಷ ದೇಶದಲ್ಲೇ ಒಳ್ಳೆಯ ಸಾಧನೆ ಮಾಡಿದೆ.ಎಕ್ಸಿಟ್ ಪೋಲ್ ಸಮೀಕ್ಷೆಗಳು ತಲೆ ಕೆಳಗಾಗುವಂತೆ ಫಲಿತಾಂಶ ಬಂದಿದೆ.ಕಳೆದ ಮರ‍್ನಾಲ್ಕು ದಿನಗಳಿಂದ ಮಾಧ್ಯಮಗಳಲ್ಲಿ ಬಿಜೆಪಿ ಪಕ್ಷ ೪೦೦ ಸ್ಥಾನಗಳು ಗೆಲ್ಲುತ್ತದೆ ಎಂದು ಹುಸಿ ಸಮೀಕ್ಷೆಗಳು ತೋರಿಸುತ್ತಿದ್ದಾರೆ.ಆದರೆ ಈಗ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ಇಂಡಿಯಾ ಒಕ್ಕೂಟದ ಪರವಾಗಿ ಮತ ಚಲಾವಣೆ ಮಾಡಿರುವುದು ಫಲಿತಾಂಶ ಮೂಲಕ ಬಹಿರಂಗಪಟ್ಟಿದೆ.ಕಳೆದ ೧೦ ರ‍್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತಕ್ಕೆ ಮತ್ತು ಸುಳ್ಳು ಭರವಸೆಗಳಿಗೆ ದೇಶದ ಜನ ತಕ್ಕ ಪಾಠ ಕಲಿಸಿದ್ದಾರೆ.ಕಲಬುರಗಿಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ರ‍್ಥಿ ರಾಧಾಕೃಷ್ಣ ದೊಡ್ಡಮನಿ ಹೆಚ್ಚಿನ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.ಕಳೆದ ಲೋಕಸಭೆ ಚುನಾವಣೆಯ ಸೋಲಿನ ಸೇಡು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲಾಗಿದೆ.ಈಗ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ರ‍್ಕಾರ ರಚನೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಸೋಹೆಲ್ ಪಟೇಲ್, ರಾಜಕುಮಾರ ಪಾಟೀಲ್, ಶಿವಪುತ್ರಪ್ಪ ಜಿಡ್ಡಗಿ, ರಾಜಕುಮಾರ ಬಬಲಾದ, ರಾಮಣ್ಣ ನಾಯಕೋಡಿ, ವಿಠೋಬಾ ಹಿರೇಕುರಬರ,ವಿಶ್ವನಾಥ ಮಲಘಾಣ,ಮಕ್ಬೂಲ್ ಶೇಖ್,ರವಿ ಗೌರ, ದುಂಡಪ್ಪ ಜಮಾದಾರ, ತಿಪ್ಪಣ್ಣ ಗಾಡಿ ವಡ್ಡರ, ದುಂಡು ಗೌಡಗೌಂವ, ಗುರುಶಾಂತಯ್ಯ ಝಳಕಿಮಠ,ರೋಹಿದಾಸ ರಾಠೋಡ,ಯಲ್ಲಾಲಿಂಗ ಅವಟಗಿ,ಅಂಬಣ್ಣ ಕುದುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.