ಶಹಾಪುರ :
ಸಂಘ, ಸಂಸ್ಥೆಗಳು ಸಾಧನೆಯ ಮುನ್ನಡೆಯಲ್ಲಿ ಸಾಗಬೇಕಾದರೆ ಆಯಾ ಸಂಘದ ಪದಾಧಿಕಾರಿಗಳಾಗಲಿ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ರ‍್ಗ ಪರಸ್ಪರರಲ್ಲಿ ಸೇವಾ ಮನೋಭಾವ ಸಂಘದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಏಕದಂಡಗಿ ಮಠದ ಶ್ರೀ ಅಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ನಗರದ ಕಾಳಿಕಾದೇವಿ ಸಭಾಂಗಣದಲ್ಲಿ ಶ್ರೀಕಾಳಿಕಾದೇವಿ ಕರಕುಶಲಗಾರರ ಸಹಕಾರ ಸಂಘದ ೧೯ ನೇ ರ‍್ಷದ ವರ‍್ಷಿಕ ಮಹಾಸಭೆ ಹಾಗೂ ಪ್ರತಿಭಾವಂತ ವಿದ್ಯರ‍್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘದ ನಿಯಮಗಳನ್ನು ಪಾಲಿಸುವ ಮೂಲಕ ಶ್ರೀಕಾಳಿಕಾದೇವಿ ಕರಕುಶಲಗಾರರ ಸಹಕಾರ ಸಂಘ ಅಚ್ಚುಕಟ್ಟಾಗಿ ಕರ‍್ಯನರ‍್ವಹಿಸುತ್ತಾ ಬಂದಿರುವ ಹಿನ್ನೆಲೆ ಇಂದು ೧೯ ನೇ ರ‍್ಷದ ವರ‍್ಷಿಕೋತ್ಸವದೊಂದಿಗೆ ಲಾಭದಲ್ಲಿ ಮುಂದುವರೆದಿದೆ. ಕಾನೂನು ಪರಿಪಾಲನೆ ಕಷ್ಟಸಾಧ್ಯ. ಆದರೆ ಮಾನವೀಯ ನೆಲೆಗಟ್ಟಿನಲ್ಲಿ ಸಹಕಾರ ಬ್ಯಾಂಕ್‌ಗಳು ನಡೆಸಬೇಕು. ಸಾಲಗಾರರನ್ನು ಅಪರಾಧಿಗಳಂತೆ ಕಾಣಬಾರದು ಕಾರಣ ಸಾಲಗಾರರು ನೀಡುವ ಬಡ್ಡಿಯಿಂದಲೇ ಬ್ಯಾಂಕ್ ನಡೆಯುತ್ತದೆ. ಹೀಗಾಗಿ ಎಂದಿಗೂ ಸಾಲಗಾರರನ್ನು ಅಪರಾಧಿಗಳಂತೆ ಕಾಣಬಾರದು ಅವರ ಸಮಸ್ಯೆಗಳೇನು ಎಂಬುದನ್ನು ತಾಳ್ಮೆಯಿಂದ ತಿಳಿದುಕೊಂಡು ಸರ‍್ಪಕ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷ ಮಲ್ಲಿಕರ‍್ಜುನ ಮುದ್ನೂರ ಮಾತನಾಡಿ, ಸಂಘ ಸಂಸ್ಥೆಗಳು ಎಂದಾಗ ಸಮಸ್ಯೆಗಳು ಬರುವದು ಸಹಜ, ಅವುಗಳನ್ನು ಸರ‍್ಪಕವಾಗಿ ನಿಭಾಯಿಸಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಸಾಕಷ್ಟು ಸಂಸ್ಥೆಗಳು ದಿವಾಳಿಯಾಗಿರುವದನ್ನು ಕಾಣುತ್ತೇವೆ.ವಿಶ್ವರ‍್ಮ ಸಮಾಜ ವಿಶ್ವಬಂಧು ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಸಹಕಾರ ಸಂಘದ ಸೇವಾ ಕೈಂರ‍್ಯವು ಚನ್ನಾಗಿರುವದರಿಂದಲೇ ಬ್ಯಾಂಕ್ ೧೯ ನೇ ರ‍್ಷಕ್ಕೆ ಕಾಲಿಟ್ಟಿದೆ. ಹೀಗೆ ಬ್ಯಾಂಕ್ ಉತ್ತಮ ಕರ‍್ಯಗಳನ್ನು ಮಾಡುತ್ತಾ. ಸಂಘದ ನೂತನ ಉದ್ಯಮಗಳನ್ನು ಕೈಗೊಂಡು ಹಲವರಿಗೆ ಉದ್ಯೋಗ ಕಲ್ಪಿಸುವದರ ಜತೆಗೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಹಿರಿಯ ಪತ್ರರ‍್ತ ನಾರಾಯಣಾಚರ‍್ಯ ಸಗರ ಮಾತನಾಡಿದರು. ಲೆಕ್ಕ ಪರಿಶೋಧಕರಾದ ಶರಣಬಸವ ಬ್ಯಾಂಕ್‌ನ ಸಮಗ್ರ ವಹಿವಾಟು ಕುರಿತು ತಿಳಿಸಿದರು. ದೇವಿಂದ್ರಪ್ಪ ವಿಶ್ವರ‍್ಮ ಕನ್ಯಾಕೋಳೂರ ಪ್ರಾಸ್ತವಿಕವಾಗಿ ಮಾತನಾಡಿದರು. ಬ್ಯಾಂಕಿನ ಕರ‍್ಯರ‍್ಶಿ ದೇವಿಂದ್ರಪ್ಪಗೌಡ ವರ‍್ಷಿಕ ಮಹಾಸಭೆಯ ಪತ್ರವನ್ನು ಓದಿದರು.ಏಕದಂಡಿಗಿ ಮಠದ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಅಧ್ಯಕ್ಷ ಶಂಕರಲಿಂಗ ಪತ್ತಾರ ಅಧ್ಯಕ್ಷತೆವಹಿಸಿದ್ದರು.
ವಿದ್ಯರ‍್ಥಿನಿ ದೀಪಿಕಾ ಪತ್ತಾರ ಎಂಬಿಬಿಎಸ್ ಉಚಿತ ಸ್ಥಾನ ಪಡೆದ ಹಿನ್ನೆಲೆ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯರ‍್ಥಿಗಳಿಗೆ ಗೌರವ ಧನ ನೀಡಿ ಗೌರವಿಸಲಾಯಿತು.