ರಾಯಚೂರು: ತಾಲೂಕಿನ ಕೊರ್ವಿಹಾಳ ಗ್ರಾಮ ದಿಂದ ನಗರಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರಿಸುತ್ತಿದ್ದ ಸಂದರ್ಭದಲ್ಲಿ ಸಗಮಕುಂಟಾ ಗ್ರಾಮದಲ್ಲಿ ಬಸ್‌ನ ಸ್ಟೇರಿಂಗ್ ಏಕಾಏಕಿ ಕಟ್ ಆದ ಪರಿಣಾಮ ಬಸ್ ಪಲ್ಪಿ ಹೊಡದ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗಟ್ಟಿದ್ದು, ಬಸ್‌ನ ಸ್ಟೇರಿಂಗ್ ಕಟ್ ಆದ ತಕ್ಷಣ ಬಸ್‌ನ್ನು ರಸ್ತೆ ಪಕ್ಕಕೆ ನಿಲ್ಲಿಸಲು ಚಾಲಕ ಪಯತ್ನಿಸಿದಾಗ ರಸ್ತೆ ಪಕ್ಕದ ಮಣ್ಣು ಕುಸಿದು ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ ಸಂಚಾರಿಸುತ್ತಿದ್ದ ಸುಮಾರು ೧೫ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯ ದಿಂದ ಪಾರು ಆಗಿದ್ದಾರೆ. ಕೊರ್ವಿಹಾಳ ಗ್ರಾಮದ ೯ನೇ ತರಗತಿ ವಿದ್ಯಾರ್ಥಿ ಸಂಗೀತ ತೀವ್ರವಾಗಿ ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದಾಖಲಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.