ಸಿಂಧನೂರು.ಸ.೨೬: ಟಿಪ್ಪು ಸುಲ್ತಾನ್‌ರವರ ಅಂದಿನ ಕಾಲಗಟ್ಟದಲ್ಲಿ ಕರ್ನಾಟಕದ ಆರ್ಥಿಕ ವಲಯವನ್ನು ಉತ್ತಮ ಪಡಿಸುವ ಮೂಲಕ ಮೈಸೂರು ಹುಲಿ ಎಂಬ ಬಿರುದು ಪಡೆದು ಕೊಂಡಾತ ಈ ಬಿರುದನ್ನು ಯಾರೋ ಮಹಾರಾಜರು ನೀಡಿದಲ್ಲ, ಈ ನಾಡಿನ ಪ್ರಜೆಗಳು ಟಿಪ್ಪುಗೆ ಮೈಸೂರು ಹುಲಿ ಬಿರುದು ನೀಡಿದ್ದಾರೆ ಎನ್ನುವದನ್ನು ನಾವು ಮರೆಯಬಾರದು, ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಎಂದರೆ ಟಿಪ್ಪು ಸುಲ್ತಾನ್ ಎಂದು ವಕೀಲರಾದ ನಿರುಪಾದೆಪ್ಪ ಗುಡಿಹಾಳ ಹೇಳಿದರು.
ಅವರು ಗುರುವಾರ ಮಾಜಿ ಕೇಂದ್ರ ಮಂತ್ರಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮುಸ್ಲಿಂ ಯುವಕರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಿ, ನಂತರ ಸಂಘಟನಾಕಾರರನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯವರು ಟಿಪ್ಪುವಿನ ಇತಿಹಾಸವನ್ನು ತಿರುಚಬಹುದು ಆದರೆ ಕನ್ನಂಬಾಡಿ ಕಟ್ಟೆಯನ್ನ ಯದುವಂಶದವರು ಕಟ್ಟಿದರು ಅದಕ್ಕೆ ಭೂಮಿ ಪೂಜೆ ಮಾಡಿದವರು ಟಿಪ್ಪು ಎನ್ನುವದನ್ನು ನಾವು ಮರೆಯಬಾರದು, ಯಾರೋ ಏನೋ ಹೇಳಬಹುದು, ರೈಲಿನ ಹೆಸರನ್ನು ತೆಗೆಯಬಹುದು. ಆದರೆ ನಾಡಿನ ಜನರ ಮನಸ್ಸಿನಿಂದ ಯಾರು ತೆಗೆಯಲು ಸಾಧ್ಯವಾಗದು. ಟಿಪ್ಪು ಆಡಳಿತ, ಧೈರ್ಯ ಶೌರ್ಯ, ಕಲ್ಯಾಣ ಕಾರ್ಯಕ್ರಮಗಳನ್ನು ಯಾರು ಅಲ್ಲೆಗೆಳೆಯಲು ಸಾಧ್ಯವಾಗದು ಎಂದರು.
ಬಿಜೆಪಿಯವರು ದೇಶದ ಭದ್ರತೆ, ಅಭಿವೃದ್ಧಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದಂತಹ ಸಂವಿಧಾನದಿAದ ನಾವೆಲ್ಲಾ ಉಳಿದಿದ್ದೆವೆ. ಪ್ರಧಾನಿ ಮೋದಿಯವರೇ ಸಂವಿಧಾನ ಬದಲಾವಣೆ ಮಾಡುತ್ತೆವೆಂದು ಹೇಳಿದ ಕಾರಣಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ೨೪೦ ಸೀಟುಗಳಿಗೆ ಜನ ಸಿಮಿತಗೊಳಿಸಿದ್ದಾರೆಂಬುದು ನೆನಪಿರಲಿ ಎಂದು ಮನವರಿಕೆ ಮಾಡಿಕೊಟ್ಟರು. ದೇಶದ ಸ್ವಾತಂತ್ರ‍್ಯಕ್ಕೆ ತನ್ನ ಮಕ್ಕಳನ್ನು ಒತ್ತೆಯಾಗಿಟ್ಟವರು ಟಿಪ್ಪುಸುಲ್ತಾನ್ ಮಾತ್ರ. ದೇಶಕ್ಕಾಗಿ ರಕ್ತ ಚೆಲ್ಲಿದವರು ನಾವು ನೀವಲ್ಲ ಯತ್ನಾಳ್ ಅವರೇ ಎಂದು ಕಟುವಾಗಿ ಟೀಕಿಸಿ, ಮತದಾರರ ಭಿಕ್ಷೆಯಿಂದ ಶಾಸಕನಾಗಿ ನೀವು ಆಯ್ಕೆಯಾಗಿದ್ದು ಎನ್ನುವುದು ಮರೆಯಬೇಡಿ ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಡಿ.ಎಚ್.ಕಂಬಳಿ ಮಾತನಾಡಿ, ನೀರಾವರಿ, ತಂತ್ರಜ್ಞಾನ, ಭೂ ಸುಧಾರಣೆ ತರುವ ಕೆಲಸವನ್ನು ಆಗಿನ ಕಾಲದಲ್ಲಿ ರಾಜಾಹುಲಿ ಎಂದೇ ಪ್ರಖ್ಯಾತಿಯಾದ ಟಿಪ್ಪುಸುಲ್ತಾನ್ ಮಾಡಿದ್ದಾರೆ. ಬಿಜೆಪಿಯವರು ಸ್ವಯಂ ಘೋಷಿತ ದೇಶ ಪ್ರೇಮಿಗಳು ಅವರು ಸಂವಿಧಾನಕ್ಕೆ ಬೆಂಕಿ ಇಡುವವರು. ಅದನ್ನು ವಿರೋಧಿಸುವವರು ದೇಶದಲ್ಲಿ ಆಡಳಿತ ನಡೆಸುತ್ತಿರುವುದು ದುರ್ದೈವ ಕೋಮುವಾದಿಗಳು ರಾಜಕಾರಣಕ್ಕಾಗಿ ಒಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಖಾರವಾಗಿಯೇ ಟೀಕಿಸಿದರು.
ಡಿ.ಎಚ್.ಪೂಜಾರ್ ಮಾತನಾಡಿ, ಲಜ್ಜೆಗೇಡಿ ನಾಲಿಗೆಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಿಪ್ಪುಸುಲ್ತಾನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣದಿಂದ ಆತ ಎಲ್ಲೆ ಹೋದರು ಕಂಡಲ್ಲಿ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವು ಆಗಬೇಕೆಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿ, ಒಂದು ದೇಶ, ಒಂದು ಚುನಾವಣೆ ತುಂಬಾ ವಿಷಕಾರಿ ಮತ್ತು ಅಪಾಯಕಾರಿ ಅದನ್ನು ವಿರೋಧಿಸಬೇಕಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಿAದ ನೂರಾರು ಸಂಖ್ಯೆಯಲ್ಲಿ ಯುವಕರು ತಹಶೀಲ್ದಾರ್ ಕಚೇರಿವರೆಗೂ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ನಂತರ ತಹಶೀಲ್ದಾರರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಖಾಜಿ ಮಲ್ಲಿಕ್ ಸಪಿವುಲ್ಲಾಖಾನ್, ಅಬ್ದುಲ್ ಕರಿಂ, ಹಭೀಬ್ ಖಾಜಿ, ಹನುಮಂತ ಕರ್ನಿ, ಯೂಸುಫ್ ಎತ್ಮಾರಿ, ದಾವೂದ್ ಹಾಸ್ಮಿ, ವಿರೇಶ ಉಪ್ಪಲದೊಡ್ಡಿ, ರಮೇಶ ಬಪ್ಪೂರು, ದವಲಸಾಬ್ ದೊಡ್ಮನಿ, ಸೊಹೆಲ್ ದೇಸಾಯಿ, ಸುದೀಪ್, ರಬ್ಬಾನಿ, ಖದೀರ್, ಮಹ್ಮದ್ ಸಮಿ, ಆಲಂಭಾಷಾ ಮುಂತಾದವರಿದ್ದರು.