ಚಿಂಚೋಳಿ:
ಕೆಲಜನ ರ‍್ಕಾರಿ ನೌಕರಸ್ಥರು ಚಿಂಚೋಳಿ ತಾಲೂಕಿಗೆ ರ‍್ಗಾವಣೆಗೊಂಡರೆ ಭಯಪಡುವುದು ಸಹಜ ಆದರೆ ನಾನಿಲ್ಲಿ ಮೂರು ರ‍್ಷಗಳ ಅವಧಿಗೆ ಸೇವೆ ಸಲ್ಲಿಸಿ ನೆಮ್ಮದಿಯಿಂದ ಇದ್ದೆ ನನ್ನ ಸೇವಾ ಅವಧಿಯಲ್ಲಿ ರ‍್ವರು ಸಹಕಾರ ಹಾಗೂ ಪ್ರೀತಿ ತೋರಿದ್ದಕ್ಕೆ ನಾನು ನಿಮ್ಮಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ರವಿಕುಮಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಅವರು ನಗರದ ನೂತನ ವಕೀಲರ ಸಂಘದ ಕರ‍್ಯಾಲಯದಲ್ಲಿ ತಾಲೂಕಾ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ನ್ಯಾ.ರವಿಕುಮಾರ ಅವರ ಬೀಳ್ಳೋಡುವ ಸಮಾರಂಭದಲ್ಲಿ ಬೀಳ್ಕೋಡುಗೆ ಸನ್ಮಾನವನ್ನು ಸ್ವೀಕರಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು
ಅವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ ನಾನು ಮಲೆನಾಡಿನಲ್ಲಿ ಹುಟ್ಟಿ ಬೆಳೆದವನು ರ‍್ಕಾರ ಚಿಂಚೋಳಿ ನ್ಯಾಯಾಲಯಕ್ಕೆ ನನಗೆ ನ್ಯಾಯಾಧೀಶನಾಗಿ ರ‍್ಗಾವಣೆಗೊಳಿಸಿದಾಗ ನಾನು ಸ್ವಲ್ಪ ಮಟ್ಟಿಗೆ ಗಲಿಬಿಲಿಗೊಂಡೆ ನಂತರ ನಾನು ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಕುಂಚಾವರಾಂ ಕಡೆ ಹೋದಾಗ ಅಲ್ಲಿನ ಪರಿಸರ ನೋಡಿ ಸಂತಸ ಪಟ್ಟು ಮಲೆನಾಡು ಹಾಗೂ ಈ ಭಾಗಕ್ಕೆ ವ್ಯತ್ಯಾಸವಿಲ್ಲವೆಂದು ಭಾವಿಸಿಕೊಂಡೆ ಈ ಭಾಗದ ಸುಂದರ ಪ್ರಕೃತಿಗೆ ನಾನು ಮನಸೋತು ಚಿಂಚೋಳಿ ಕೂಡ ಮಿನಿ ಮಲೆನಾಡು ಎಂದುಕೊಂಡೆ ಎಂದು ನ್ಯಾ.ರವಿಕುಮಾರ ತಮ್ಮ ಪ್ರಕೃತಿ ಪ್ರೇಮ ಹೊರ ಹಾಕಿದರು
ನನ್ನ ಸೇವಾ ಅವಧಿಯಲ್ಲಿ ವಕೀಲರು ಪೊಲೀಸ ಇಲಾಖೆ ಹಾಗೂ ಇತರೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಹಕಾರದಿಂದ ವಿವಿಧ ಸರಕಾರಿ ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಸರಕಾರದ ಸವಲತ್ತುಗಳನ್ನು ಜನಕ್ಕೆ ಮುಟ್ಟುವ ಹಾಗೇ ಪ್ರಯತ್ನಿಸಿದೆ ತಾಲೂಕಿನ ವಿವಿಧ ಶಾಲೆ ಹಾಗೂ ಹಳ್ಳಿಗಳಲ್ಲಿ ಕಾನೂನು ಅರಿವು ನೆರವು ಕರ‍್ಯಕ್ರಮದ ಜಾಗೃತಿ ಮೂಡಿಸಿದೆ ಲೋಕ ಅದಾಲತಗಳು ಸಾಮಾಜಿಕ ಕರ‍್ಯಕ್ರಮಗಳನ್ನು ನೆರವೇರಿಸಲು ನೀವು ನನಗೆ ಸಹಕಾರ ನೀಡಿದ್ದೀರಿ ಎಂದು ವಕೀಲರಿಗೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು
ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮಾತನಾಡಿ ಸಾಹೇಬರು ತಮ್ಮ ಮೂರು ರ‍್ಷಗಳ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ರ‍್ಕಾರಿ ಕೆಲಸಗಳನ್ನು ನೆರವೇರಿಸಿ ಎಲ್ಲರಿಗೂ ಚಿರ ಪರಿಚಿತರಾಗಿದ್ದಾರೆ ಇವರೊಬ್ಬ ನ್ಯಾಯಾಧೀಶ ಎಂದುಕೊಳ್ಳದೇ ಸಂಘದ ಸದಸ್ಯರಾಗಿ ಹಿರಿಯ ಕಿರಿಯ ವಕೀಲರಿಗೆ ಅನೇಕ ಸಲಹೆಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ನ್ಯಾಯಾಧೀಶರ ಸೇವೆಯನ್ನು ಕೊಂಡಾಡಿದರು
ಈ ಸಂರ‍್ಭದಲ್ಲಿ ವಕೀಲರಾದ ಶೇಖ್ ಬಖ್ತಿಯಾರ ಜಾಗೀರದಾರ ಶಾಮರಾವ ದೇಗಲ್ಮಡಿ ಶರಣರೆಡ್ಡಿ ಪೊಂಗಾ ಮಾಣಿಕರಾವ ಗುಲಗುಂಜಿ ಶಿವಶರಣಪ್ಪಾ ಜಾಪಟ್ಟಿ ಸುಲೇಪೇಟ ಸಿಪಿಐ ಜಗದೀಶ ಕೆ.ಜಿ ಸೇರಿದಂತೆ ಇವರರು ನ್ಯಾಯಾಧೀಶ ರವಿಕುಮಾರ ಅವರ ಸೇವೆಯನ್ನು ಕೊಂಡಾಡಿದರು
ಕರ‍್ಯಕ್ರಮದ ವೇದಿಕೆಯಲ್ಲಿ ಹೆಚುವರಿ ನ್ಯಾಯಾಧೀಶ ದತ್ತಕುಮಾರ ಜವಳಕರ್ ಹಿರಿಯ ವಕೀಲ ಜಗನ್ನಾಥ ಅಗ್ನಿಹೋತ್ರಿ ಸಂಘದ ಉಪಾಧ್ಯಕ್ಷ ಜಗನ್ನಾಥ ಗಂಜಗೇರಿ ಪ್ರಧಾನ ಕರ‍್ಯರ‍್ಶಿ ಗುಂಡಪ್ಪಾ ಗೋಖಲೆ ಕೋಶಾಧ್ಯಕ್ಷ ಪ್ರವೀಣ ನಮ್ಲಿಕರ್ ಉಪಸ್ಥಿತರಿದ್ದರು ಹಿರಿಯ ವಕೀಲ ವಿಶ್ವನಾಥ ಬೆನಕಿನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚಂದ್ರಶೇಖರ ಮಲ್ಸಾ ನಿರೂಪಿಸಿದರು ಶಶಿಕಾಂತ ಅಡಕಿ ವಂದಿಸಿದರು
ಈ ಸಂರ‍್ಭದಲ್ಲಿ ಅನೇಕ ಜನ ವಕೀಲರು ಹಾಗೂ ಪೊಲೀಸ ಇಲಾಖೆಯವರು ನ್ಯಾ. ರವಿಕುಮಾರ ಅವರಿಗೆ ವಯಕ್ತಿಕವಾಗಿ ಸನ್ಮಾನಿಸಿ ಶುಭ ಕೋರಿದರು ಈ ಕರ‍್ಯಕ್ರಮದಲ್ಲಿ ಹಿರಿಯ ಹಾಗೂ ಕಿರಿಯ ವಕೀಲರು ಹಾಜರಾಗಿ ಸಾಕ್ಷಿಯಾದರು