ರಾಯಚೂರು,ಮೇ.10: ಕಳ್ಳನೋರ್ವನನ್ನು ಬಂಧಿಸಿದ ಪೊಲೀಸರು ಇತನ ಬಳಿ ಇದ್ದ 9 ಗ್ಯಾಸ್ ಸಿಲೆಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಪೇಟೆಯ ರಾಮು ತಂದೆ ಹನುಮಂತ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 31 ಸಾ.ರೂ. ಬೆಲೆ ಬಾಳುವ ಸಿಲೆಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಎಂ.ಈರಣ್ಣ ವೃತ್ತದ ಬಳಿಯ ಸಿರಾಜು ಉಲ್ ಉಲುಮ್ ಮಸೀದಿಯಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡಲು ಸಿಲೆಂಡರ್ ಉಪಯೋಗಿಸಲಾಗುತ್ತಿತು. ಈ ಸಿಲೆಂಡರ್‌ಗಳನ್ನು ಏಪ್ರೀಲ್ 12 ರಂದು ಹೋಟೆಲ್‌ನಲ್ಲಿ ಇಟ್ಟಿದ್ದು, ರಾತ್ರಿ ವೇಳೆ ಕಳ್ಳತನವಾಗಿರುವ ಕುರಿತಂತೆ ಜಾನಿ ಮೊಹಲ್ಲಾ ನಿವಾಸಿ ಮೊಹ್ಮದ್ ಅಕ್ರಮ ತಂದೆ ಅಬ್ದುಲ್ ನಬಿ ಅವರು ಸದರ ಬಜಾರ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಸಿಲೆಂಡರ್ ವಶಪಡಿಸಕೊಳ್ಳವಲ್ಲಿ ಯಶ್ವಸಿಯಾಗಿದ್ದಾರೆ.