ಔರಾದ: ಅಕ್ಕಮಹಾದೇವಿ, ಚೆನ್ನಬಸವಣ್ಣ ಹಾಗೂ ೧೨ನೇ ಶತಮಾನದ ಶರಣರು ಬಸವಣ್ಣನವರನ್ನು ಶಿವನಂತೆ ಕಂಡರು ಎಂದು ಔರಾದ ರ‍್ಕಾರಿ ಪದವಿಪರ‍್ವ ಕಾಲೇಜ ಪ್ರಾಂಶುಪಾಲ ಓಂ ಪ್ರಕಾಶ್ ದಡ್ಡ ಹೇಳಿದರು.
ಸಂತಪುರ್ ಸಿದ್ದರಾಮೇಶ್ವರ ಪದವಿಪರ‍್ವ ಕಾಲೇಜಿನಲ್ಲಿ ಬಸವ ಜಯಂತಿ ಹಾಗೂ ಲಿಂ.ನಾಗಮ್ಮ ಸಿದ್ರಾಮಪ್ಪ ನುಚ್ಚಾ ಪುಣ್ಯಸ್ಮರಣೆ ದತ್ತಿ ಉಪನ್ಯಾಸ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣ ಲಿಂಗಾಯತ ರ‍್ಮಕ್ಕೆ ಗುರು ಅಷ್ಟೇ ಅಲ್ಲದೆ,ಇಡೀ ವಿಶ್ವಕ್ಕೆ ಗುರು ಆಗಿದ್ದಾರೆ. ಬಸವ ಎಂಬ ನಾಮ ಜಪಿಸುವುದರಿಂದ ಪಾಪ ಪರಿಹಾರವಾಗುವಂತ ಶಕ್ತಿ ಬಸವ ಎಂಬ ಹೆಸರಿನಲ್ಲಿದೆ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ ದಲಿತರ, ಬಡವರ ಮತ್ತು ಮಹಿಳೆಯರ ಸಮಾನತೆಗಾಗಿ ಹೋರಾಡಿದವರು ಮಹಾ ಮಾನವತವಾದಿ ಬಸವಣ್ಣನವರಾಗಿದ್ದಾರೆ. ಬಸವಣ್ಣನವರಿಗೆ ಸರ‍್ಥ ಅರಸರ ಆಶ್ರಿತವಾಗಿದ್ದರೆ ಅಸ್ಪೃಶ್ಯತೆ ಮತ್ತು ಅಸಮಾನತೆ ಸಂಪರ‍್ಣ ಬದಲಾಯಿಸುತ್ತಿದ್ದರು ಎಂದರು.
ಬಸವ ಜಯಂತಿ ಪ್ರಯುಕ್ತವಾಗಿ ಪ್ರತಿಭಾವಂತ ವಿದ್ಯರ‍್ಥಿಗಳಾದ ಲಕ್ಷ್ಮೀ ಸಂಜುಕುಮಾರ, ಸುಧಾರಾಣಿ ಸಂಗಪ್ಪ ಮತ್ತು ಆರತಿ ಶಿವರಾಜ ವಿದ್ಯರ‍್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ಮೀನಾಕ್ಷಿ ಸ್ವಾಮಿ ಇದ್ದರು.