ರಾಯಚೂರು,ಜು.21: ಮಹಾರಾಷ್ಟçದ ಪಶ್ಚಿಮ ಘಟಗಳಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಅಣೆಕಟ್ಟಿನಿಂದ 1 ಲಕ್ಷ 20 ಸಾ.ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ನಾರಾಯಣಪುರ ಜಲಾಶಯದಲ್ಲಿಯೂ ಒಳಹರಿವು ಏರಿಕೆಯಾಗಿದ್ದು, ನಾರಾಯಣಪುರ ಜಲಾಶಯದ 24 ಗೇಟ್‌ಗಳಿಂದ ಕೃಷ್ಣ ನದಿಗೆ ನಿತ್ಯ 1 ಲಕ್ಷ 80 ಸಾ.ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ಲಿಂಗಸೂಗೂರ ತಾಲೂಕಿನ ಶೀಲಹಳ್ಳಿ, ಹಂಚಿನಾಳ ಸೇತುವೆಗೆ ತಲುಪಿದ್ದು ಯಾವುದೇ ಸಂದರ್ಭದಲ್ಲಿ ನೀರು ಸೇತುವೆ ಮೇಲೆ ಹರಿಯಬಹುದಾಗಿದೆ. ಈ ಹಿನ್ನಲೆಯಲ್ಲಿ ಲಿಂಗಸೂಗೂರು ತಾಲೂಕಾಡಳಿತವು ಶೀಲಹಳ್ಳಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲು ಸಿದ್ದತೆ ಮಾಡಕೊಂಡಿದ್ದಾರೆ. ಇನ್ನು ಕಡದರಗಡ್ಡಿ,ಯಳಗೊಂದಿ,ಯರಗೋಡಿ ನಡುಗಡ್ಡೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಜಿಲ್ಲಾಡಳಿತವು ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಜಲದರ್ಗು ಹಾಗೂ ದೇವದುರ್ಗ ತಾಲೂಕಿನ ಕೋಲೂರು ಸೇತುವೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಲ್ಲಿ ಸಂಚಾರ ಸ್ಥಗಿತಗೊಳಿಸಲು ದೇವದುರ್ಗ ತಾಲೂಕಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸೇತುವೆ ಬಳಿ ಪೊಲೀಸರನ್ನು ನಿಯೋಜನೆ ಮಾಡಲು ತಯಾರಿ ಮಾಡಿಕೊಂಡಿದೆ. ದೇವದುರ್ಗ ತಾಲೂಕಿನ ಜೋಸದಡಗಿ, ಅಣೇ ಮಲ್ಲೇಶ್ವರ, ಗೂಗಲ್,ಮದರಕಲ್ ನದಿ ಪಾತ್ರದ ಗ್ರಾಮಗಳಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
ರಾಯಚೂರು ತಾಲೂಕಿನ ಅರಷಿಣಗಿ, ಗುರ್ಜಾಪುರ, ಕರೆಕಲ್, ಕಾಡ್ಲೂರು, ದೊಂಗ ರಾಂಪೂರ, ನದಿ ಪಾತ್ರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಹಿಸಿಲಾಗಿದೆ. ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ, ಮತ್ತಷ್ಟು ಹೊರ ಹರಿವು ಕೂಡ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಪ್ರವಾಹದ ಬೀತಿ ಎದುರಾಗಿದ್ದು, ಈಗಾಗಲೇ ನದಿ ಪಾತ್ರ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆಯನ್ನು ನೀಡಿದೆ.
ಇನ್ನೂ ತುಂಗಭದ್ರ ಜಲಾಶಯದಲ್ಲಿ ನೀರು ಭರ್ತಿಯಾಗುತ್ತಿದ್ದು, ಜಲಾಶಯ ದಿಂದ ನಾಲಕು ಸಾವಿರ ಕುಸೆಕ್ಸ್ ನಿಮದ ಆರಮ ಸಾವಿರ ಕುಸೆಕ್ಸ್ ನೀರು ಹೆಚ್ಚಿಸಲಾಗಿದೆ. ಇನ್ನಷ್ಟು ನೀರು ಹೆಚ್ಚಳವಾಗುವ ಸಧ್ಯತೆಗಳಿದ್ದು ತುಂಗಭದ್ರ ನದಿಪಾತ್ರ ಜನರು ಎಚ್ಚರಿಕೆಯಿಂದರಲು ಜಿಲ್ಲಾಡಳಿತ ಮನವಿ ಮಾಡಿದೆ.