ತುರ್ವಿಹಾಳ : ಪಟ್ಟಣದ ವಿವಿಧ ಬದಿಗಳಲ್ಲಿ ಇರುವ ಬಿದಿ ನಾಯಿಗಳು ದಾರಿಹೋಕರ ಮೇಲೆ ದಿಢೀರ್ ದಾಳಿ ಮಾಡುತ್ತಿವೆ. ಬಿದಿ ನಾಯಿಗಳ ಕಚ್ಚಾಟದಂದಿ ಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದಲ್ಲಿ ಬಿದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಹೋಟೆಲ್, ಅಂಗಡಿ ಮುಂಗಟ್ಟುಗಳ ಮುಂದೆ ಇರುವ ಬಿದಿ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ, ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ.ಪಟ್ಟಣದಲ್ಲಿ ಬೈಕ್‌ನಿಂದ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ತುಂಬಾನೆ ಇವೆ. ರಾತ್ರಿ ವೇಳೆ ಬಿದಿ ನಾಯಿಗಳ ಹಾವಳಿಯಿಂದ ಕಣ್ಣಿಗೆ ನಿದ್ದೆಯೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣ ಪೋಲಿಸ್ ಠಾಣೆ, ಸಂತೆ ಮಾರುಕಟ್ಟೆ, ಬಸ್ ನಿಲ್ದಾಣ,ವಾಲ್ಮೀಕಿ ವೃತ್ತ, ಹಗಸಿ ಕಟ್ಟಿ ಸೇರಿದಂತೆ ಎಲ್ಲೆಡೆಯೂ ನಾಯಿಗಳು ಪರಸ್ಪರ ಕಚ್ಚಾಟದಿಂದ ಸಾರ್ವಜನಿಕರರು ಬೇಸತ್ತು ಹೋಗಿದ್ದಾರೆ.ಬಿದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಬ0ಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದರು.
ನಾಯಿಗಳ ನಿರಂತರ ಕಚ್ಚಾಟ ದಾಳಿಯಿಂದಾಗಿ ಜನರು ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ರಸ್ತೆಯ ಅಲ್ಲಲ್ಲಿ ಗುಂಪು ಗುಂಪಾಗಿ ಕಂಡು ಬರುವ ಬೀದಿ ನಾಯಿಗಳು ಯಾವಾಗ ಯಾರ ಮೈಮೇಲೆ ಎರಗುತ್ತವೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಸದ್ಯ ನಾಯಿಗಳ ಕಾಟ ಹೆಚ್ಚಾದ ಬಗ್ಗೆ ಸ್ಥಳಿಯ ಅಡಳಿತವಾದ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಿಗೆ ಹಲವು ಬಾರಿ ಮಾಹಿತಿ ನಿಡಿದರು ಬಿದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಹೋರತು ಕಡಿಮೆ ಯಾಗಿಲ್ಲ .ಎಂದು ಪಟ್ಟಣದ ನಿವಾಸಿ ಶಾಮಿದ್ ಅಲಿ ಅರಬ್ ದುರಿದ್ದಾರೆ.
ಕೆಲವು ದಿನಗಳ ಹಿಂದೆ ಪಕ್ಕದ ಸಿಂಧನೂರು ನಗರದ ಬಿದಿ ನಾಯಿಗಳನ್ನು ಪಟ್ಟಣದ ಹೋರವಲಯದಲ್ಲಿ ಬಿಟ್ಟಿದ್ದರಿಂದ ಪಟ್ಟಣದಲ್ಲಿ ಬಿಡಾಡಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ, ಎನ್ನುವ ಗುಮಾನಿ ಇದೆ, ಪಟ್ಟಣದಲ್ಲಿ ಬಿದಿ ನಾಯಿಗಳಿಂದ ಯಾವುದಾದರೂ ಅನಾಹುತ ಸಂಭವಿ
ಸುವ ಮುನ್ನ ಸಂಬ0ಧಪಟ್ಟ ಪಟ್ಟಣ ಅಧಿಕಾರಿಗಳು, ಪಶು ವೈದ್ಯಾರು,ಜಂಟಿಯಾಗಿ ಬಿದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಡಿ ಶಂಕರ್ ಗೌಡ ಯುವಕ ಮಂಡಳಿಯ ಅಧ್ಯಕ್ಷ ಮಲ್ಲಯ್ಯ ಭಂಗಿ ಆಗ್ರಹಿಸಿದ್ದರು.