ಅಫಜಲಪುರ:ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಮಂಗಳವಾರ ನಡೆದ ಸರ‍್ವತ್ರಿಕ ಚುನಾವಣೆಯು ಮತಕ್ಷೇತ್ರದಲ್ಲಿ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಸುಡು ಬಿಸಿಲಿನಲ್ಲಿ ಪ್ರಜಾತಂತ್ರದ ಹಬ್ಬದಲ್ಲಿ ಪಟ್ಟಣದ ಮುಖಂಡ ಶಂಕರ ಮ್ಯಾಕೇರಿ ಯುವ ಮುಖಂಡ ಅಶೋಕ ದುದ್ದಗಿ.ಸಚೀನ ಮ್ಯಾಕೇರಿ ಸೇರಿದಂತೆ ಅನೇಕ ಮತದಾರರು ಮತದಾನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಅಫಜಲಪುರ ಮತಕ್ಷೇತ್ರದ ೨೫೧ ಮತಗಟ್ಟೆಗಳಲ್ಲಿ ಮತದಾನವು ಶಾಂತಿಯುತವಾಗಿ ನಡೆದಿದೆ.ಬೆಳಿಗ್ಗೆ ೫:೪೦ರಿಂದ ೯೦ ನಿಮಿಷಗಳವರೆಗೆ ಅಣಕು ಮತದಾನ ನಡೆಯಿತು.ನಂತರ ಬೆಳಿಗ್ಗೆ ೭ ಗಂಟೆಯಿಂದ ಆರಂಭವಾದ ಮತದಾನ ಸಂಜೆ ೬ ಗಂಟೆವರೆಗೂ ನಡೆಯಿತು.ಸಂಜೆ ೬ರೊಳಗೆ ಸರದಿ ಸಾಲಿನಲ್ಲಿದ್ದವರಿಗೆ ಮಾತ್ರ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.ನಿಗದಿತ ಸಮಯ ಮುಗಿಯುತ್ತಿದ್ದಂತೆ ಮತಗಟ್ಟೆಗಳ ಬಾಗಿಲನ್ನು ಮುಚ್ಚಲಾಯಿತು.ಹಕ್ಕು ಚಲಾಯಿಸಿದವರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಮತಗಟ್ಟೆ ಸಿಬ್ಬಂದಿ ಹಾಕಿದರು.ಮತದಾನ ಮಾಡಿದ ಕುರುಹಾಗಿ ತೋರು ಬೆರಳಿಗೆ ಹಾಕಿರುವ ಶಾಯಿಯನ್ನು ತೋರಿಸಿದ ಫೋಟೋವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸಿದರು.
ಜಾಲತಾಣದಲ್ಲಿ ಮತ ಹಾಕಿದ ವಿಡಿಯೊ:ಕಲಬುರಗಿ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಮತ ಹಾಕುವುದನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮತದಾರರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಮಾಶಾಳ ಗ್ರಾಮದ ಮತಗಟ್ಟೆಯಲ್ಲಿ ಮೊದಲು ಬಿಜೆಪಿ ಅಭ್ರ‍್ಥಿ ಉಮೇಶ್ ಜಾಧವ್ ಹೆಸರಿನ ಮುಂದೆ ಬೆರಳು ತೋರಿಸುವ ಮತದಾರ ಬಳಿಕ ಕಾಂಗ್ರೆಸ್ ಅಭ್ರ‍್ಥಿ ರಾಧಾಕೃಷ್ಣ ದೊಡ್ಮನಿ ಹೆಸರಿನ ಮುಂದಿರುವ ಬಟನ್ ಒತ್ತಿ ಮತ ಚಲಾಯಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ಮತಗಟ್ಟೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ ಮತದಾರರು ಹೇಗೆ ಫೋನ್ ಕೊಂಡೊಯ್ದ ಮತ್ತು ಚತ್ರೀಕರಿಸಿಕೊಂಡ ಎಂಬ ಬಗ್ಗೆ ರ‍್ಚೆ ನಡೆದಿದೆ.
ಮತದಾರ ಪಟ್ಟಿಯಲ್ಲಿ ಮೃತ ಅಜ್ಜಿ ಮತಗಟ್ಟೆಗೆ:ಅಫಜಲಪುರ ಪಟ್ಟಣದ ನಿವಾಸಿ ರುಕ್ಮಿಣಿಬಾಯಿ ಶಂಕರ್(೯೪) ಅಜ್ಜಿ ಜೀವಂತ ಇರುವಾಗಲೇ ಮತದಾರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮತದಾನ ರದ್ದು ಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.ಬೆಳಿಗ್ಗೆ ಮಗನ ಜತೆ ಮತದಾನಕ್ಕೆ ಅಜ್ಜಿ ಮತಗಟ್ಟೆಗೆ ಮತದಾರರ ಚೀಟಿ ಸಮೇತ ತೆರಳಿದಾಗ ಸಿಬ್ಬಂದಿಗಳು ಮತದಾರರ ಪಟ್ಟಿಯಲ್ಲಿ ನೀವು ಮೃತಪಟ್ಟಿದ್ದೀರಿ ಎಂದು ತೋರಿಸಲಾಗಿದೆ.ಹೀಗಾಗಿ ನೀವು ಮತದಾನ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ನಾನು ಜೀವಂತ ಇರುವಾಗಲೇ ನೀವು ಹೇಗೆ ಮೃತಪಟ್ಟಿದ್ದೀರಿ ಎಂದು ಹೇಳುತ್ತೀರಿ.ಯಾವುದೇ ಕಾರಣಕ್ಕೂ ನಾನು ಮತದಾನ ಮಾಡದೆ ಹೋಗುವುದಿಲ್ಲ ಎಂದು ಹಠ ಹಿಡಿದಾಗ ಚುನಾವಣಾಧಿಕಾರಿಗಳು ದಾಖಲೆ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಪ್ರಕಟಗೊಂಡಿದ್ದು ತಿಳಿದಾಗ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.