ಅಫಜಲಪುರ : ತಾಲೂಕಿನ ಗೌರ(ಬಿ.) ಗ್ರಾಮದಲ್ಲಿ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಕಬ್ಬು ಸುಟ್ಟು ಕರಕಲಾದ ಘಟನೆ ಜರುಗಿದೆ ಎಂದು ಗ್ರಾಮದ ಯುವ ಮುಖಂಡ ಶ್ರೀಕಾಂತ ದಿವಾಣಜಿ ಈ ಮಾಹಿತಿ ನೀಡಿದ್ದಾರೆ.
ಗ್ರಾಮದ ರೈತರಾದ ಅಶೋಕ ಬಾಬು ಬಜೇಂತ್ರಿ,ರಾಜು ಬಜೇಂತ್ರಿ ಅವರಿಗೆ ಸೇರಿದ ಕಬ್ಬು ಸುಟ್ಟು ಕರಕಲಾಗಿದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ರೀತಿಯಾಗಿ ಕಬ್ಬಿನ ಬೆಳೆ ಬೆಳಿಸಿದರು, ಆದರೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ನೋವು ವ್ಯಕ್ತ ಪಡಿಸಿದ ಅವರು ಹಾನಿಯಾದ ಕಬ್ಬಿಗೆ ಸರಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.