ಬಾಗಲಕೋಟೆ: ಏಪ್ರೀಲ್ ೩೦ :
ಬಾಗಲಕೋಟೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾದ ಚೆಕ್ಪೋಸ್ಟನಲ್ಲಿ ಅನುಮಾನಾಸ್ಪದಗೊಂಡ ಪ್ರಯಾಣಿಕರ ಲಗೇಜ್ಗಳ ಪರಿಶೀಲನೆ ಕಾರ್ಯ ಚುರುಕೊಗೊಳಿಸಲಾಗಿದೆ ಎಂದು ರೈಲ್ವೆ ಪ್ರೋಟೆಕ್ಷನ್ ಪೋರ್ಸನ ಉಪ ನಿರೀಕ್ಷಕ ಎಸ್.ಟಿ.ಬಾರಕಿ ತಿಳಿಸಿದ್ದಾರೆ.
ಚುನಾವಣೆಯ ಮತದಾನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ತಪಾಸಣಾ ಕಾರ್ಯ ಚುರುಗೊಂಡಿದ್ದು, ಪ್ರತಿದಿನ ಬರುವ ರೈಲಿನ ಪ್ರಯಾಣಿಕರ ಲಗೇಜ್ಗಳನ್ನು ತಪಾಸಣೆ ನೆಡೆಸಲಾಗುತ್ತಿದೆ. ವಾರದ ಪ್ರತಿ ದಿನ ಗೋಲಗುಂಬಜ್ ರೈಲು ಬರುತ್ತಿದ್ದು, ವಾರದ ಸೋಮವಾರ ದಿನ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಸಂಚಿರಿಸುತ್ತಿವೆ. ಪ್ರತಿಯೊಂದು ರೈಲಿನಲ್ಲಿ ಬರುವ ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲಿಸಲಾಗುತ್ತಿದೆ. ಇಲ್ಲಿಂದ ಹೋಗುವ ಹಾಗೂ ಬರುವ ರೈಲುಗಳ ಪ್ರಯಾಣಿಕರ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್.ಟಿ.ಬಾರಕಿ ತಿಳಿಸಿದ್ದಾರೆ.