ರಾಯಚೂರು,ಮಾ-೮: ಮಾಹಾ ಶಿವರಾತ್ರಿ ಅಂಗವಾಗಿ ಇಂದು ಜಿಲ್ಲೆಯಾದ್ಯಂತ ಹಾಗೂ ನಗರದಲ್ಲಿ ಸಡಗರ, ಸಂಭ್ರಮ ದಿಂದ ಶಿವರಾತ್ರಿ ಆಚರಣೆ ಮಾಡಲಾಯಿತು.
ನಗರದ ದೇವಸ್ಥಾನಗಳಲ್ಲಿ ಭಕ್ತರಿ ಸಾಲುಗಟ್ಟಿ ನಿಂತು ಪೂಜೆ ಕೈಂಕರ್ಯ ಮಾಡಿದರು.
ಮಧ್ಯರಾತ್ರಿ ೧೨ ಗಂಟೆಯಿAದ ಅಭಿಷೇಕದೊಂದಿಗೆ ಆರಂಭಗೊAಡ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳು ಶುಕ್ರವಾರ ಮಧ್ಯರಾತ್ರಿವರೆಗೂ ಮುಂದುವರೆಯಲಿವೆ.
ಚಂದ್ರಮೌಳೇಶ್ವರ ದೇವಸ್ಥಾನ, ನಂದೀಶ್ವರ ದೇವಸ್ಥಾನ ಸೇರಿದಂತೆ ಇನ್ನೀತರ ದೇವಸ್ಥಾನಗಳಲಿ ಭಕ್ತರು ಶಿವನ ಪೂಜೆ ಮಾಡಿದರು. ದೇವಸ್ಥಾನಗಳಿಗೆ ಆಲಂಕಾರ ಮಾಡಲಾಗಿತ್ತು. ಶುಭರಾತ್ರಿ ಹಿನ್ನಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಸಾಲುಗಟ್ಟಿ ನಿಂತು ದರ್ಶನ ಪಡೆಯಲು ಎಲ್ಲಾ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಗಳು ಮಾಡಿದ್ದವು.
ಶಿವರಾತ್ರಿ ಉಪವಾಸದೊಂದಿಗೆ ಶುಕ್ರವಾರದಂದು ಪೂಜಾ ಕಾರ್ಯಕ್ರಮಗಳು ನಡೆದವು ದೇವಸ್ಥಾನಗಳ ಹತ್ತಿರ ಯಾವುದೇ ಸಂಚಾರಕ್ಕೆ ತೊಂದರೆಯಾಗದAತೆ ವಿಶೇಷ ಪೊಲೀಸ್ ಬಂದೋಬಸ್ತ ಮಾಡಲಾಗಿತು.
ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ ದಿಂದ ಶಿವರಾತ್ರಿ ಆಚರಣೆ
