ನೀಟ್ ರದ್ದತಿಗೆ ಎಸ್‌ಎಫ್‌ಐ ಒತ್ತಾಯ ಪ್ರತಿಭಟನೆ

Eshanya Times

ರಾಯಚೂರು: ಜು-೮: ನೀಟ್ ಪರೀಕ್ಷೆಗಳು ರದ್ದುಗೊಳಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕಳೆದ ಕೆಲವು ವಾರಗಳಿಂದ ನಡೆದ ಘಟನೆಗಳನ್ನು ಗಮನಿಸಾಗ ಮತ್ತೊಮ್ಮೆ ರಾಷ್ಟೀಯ ಪರೀಕ್ಷಾ ಪ್ರಾಧಿಕಾರ ರಾಷ್ಟç ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆಯನ್ನು ಪ್ರದರ್ಶಿಸಿದೆ. ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರೆಶ್ನೆಪತ್ರಿಕೆ ಸೋರಿಕೆ ರಾಷ್ಟçದ್ಯಂತ ಸುದ್ದಿ ಮಾಡಿದೆ. ಜೂನ್ ೪ ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ ಮತ್ತು ಪೇಪರ್ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಭಾದಿತರಾಗಿದ್ದರು. ಇದರ ಜೊತೆಗೆ, ಲಕ್ಷಗಟ್ಟಲೆ ವಿದ್ಯಾರ್ಥಿಗಳು ಹಾಜರಾಗಿದ್ದ ಯುಜಿಸಿ ನೆಟ್ ಪರೀಕ್ಷೆಯು ಪೇಪರ್ ಸೋರಿಕೆ ವರದಿಗಳಿಂದ ರದ್ದುಗೊಳಿಸಲಾಯಿತು.
ಇದಲ್ಲದೆ, ನೇರವಾಗಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ವೈದ್ಯಕೀಯ ವಿಜ್ಞಾನಗಳ ರಾಷ್ಟಿçÃಯ ಪರೀಕ್ಷಾ ಮಂಡಳಿ (ಓಃಇ) ಸಹ ಪ್ರೆಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಬಗ್ಗೆ ಉಲ್ಲೇಖಿಸಿ ಓಇಇಖಿ-Pಉ ಮರು ಪ್ರವೇಶ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ಮುಂದೂಡಲು ನಿರ್ಧರಿಸಲಾಗಿದೆ.
ಉನ್ನತ ಶಿಕ್ಷಣದಲ್ಲಿನ ಸಮಸ್ಯೆಗಳು ಅಷ್ಟೇ ಅಲ್ಲದೆ, ಶಾಲಾ ಶಿಕ್ಷಣದ ಸಮಸ್ಯೆಗಳನ್ನು ಪ್ರತ್ಯೇಕಿಸುವಂತಿಲ್ಲ. ಬಿಜೆಪಿ ನೇತೃತ್ವದ ಎನ್ ಡಿ ಎ ಅವಧಿಯಲ್ಲಿ ಶಿಕ್ಷಣಕ್ಕೆ ಸಂಭAದಪಟ್ಟ ಇಲಾಖೆಗಳಿಗೆ ಬಜೆಟ್ ನಲ್ಲಿ ಹಣ ಕಡಿತ ಮಾಡಿರುವುದು, ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಒಟ್ಟು ದಾಖಲಾತಿಯಲ್ಲಿ ಕುಸಿದಿರುವುದನ್ನು ಕಾಣಬಹುದಾಗಿದೆ. ೨೦೧೮-೧೯ ಮತ್ತು ೨೦೨೧-೨೨ ರ ನಡುವೆ ಭಾರತದಲ್ಲಿ ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ ೬೧೮೮೫ ರಷ್ಟು ಕಡಿಮೆಯಾಗಿವೆ.
ಒಟ್ಟು ೧೫,೫೧,೦೦೦ ಶಾಲೆಗಳಿಂದ ೧೪,೮೯,೧೧೫ ಶಾಲೆಗಳಿಗೆ ಕುಸಿದಿದೆ. ಒಟ್ಟು ೬೧೩೬೧ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ಶಾಲೆಗಳ ಸಂಖ್ಯೆಯಲ್ಲಿ ವಿಪರೀತ ಕುಸಿತ ಹಾಗೂ ಖಾಸಗಿ ಶಾಲೆಗಳ ಸಂಖ್ಯೆಯಲ್ಲಿ ಅಗಾಧ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಬಡ – ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ. ಅತಿಯಾದ ಖಾಸಗೀಕರಣದಿಂದ ವಿದ್ಯಾರ್ಥಿಗಳು ಶುಲ್ಕವನ್ನು
ಬೇಡಿಕೆಗಳು : ಎನ್ ಟಿ ಎ ಯನ್ನು ರದ್ದುಗೊಳಿಸಬೇಕು, ⁠ಕೇಂದ್ರದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು, ⁠ಇತ್ತೀಚಿಗೆ ನೆಟ್ ಮತ್ತು ನೀಟ್ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳಿಗೆ ಪರಿಹಾರವನ್ನು ಒದಗಿಸಬೇಕು, ಪಿಹೆಚ್ಡಿ ಪ್ರವೇಶಾತಿ ಪರೀಕ್ಷೆಗೆ ನೆಟ್ ಪರೀಕ್ಷೆ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು ಎನ್ನುವ ನಿಯಮವನ್ನು ವಾಪಸ್ಸು ಪಡೆಯಬೇಕು,⁠ಪರೀಕ್ಷೆಗಳನ್ನು ಕೇಂದ್ರೀಕರಣ ಗೊಳಿಸುವುದನ್ನು ನಿಲ್ಲಿಸಬೇಕು. ಆಯಾ ರಾಜ್ಯಗಳಿಗೆ ಸ್ವಾಯತ್ತತೆಯನ್ನು ಒದಗಿಸಬೇಕು, ⁠ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುವ ದಾಳಿಗಳನ್ನು ನಿಲ್ಲಿಸಬೇಕು ಹಾಗೂ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕು, ⁠ಸಾರ್ವತ್ರಿಕ ಶಿಕ್ಷಣ ವ್ಯೆವಸ್ಥೆಯನ್ನು ಬಲಪಡಿಸಿ, ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಯತು.
ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿಗಳೂ ಭಾಗವಹಿಸಿ ಶಾಲಾ- ಕಾಲೇಜುಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (SಈI) ಕರ್ನಾಟಕ ರಾಜ್ಯ ಸಮಿತಿ ರಾಜ್ಯದ ವಿದ್ಯಾರ್ಥಿಗಳಿಗೆ ಕರೆ ನೀಡುತ್ತಿದೆ ಎಂದು ತಿಳಿಸಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು,ರಾಕೇಶ್ , ಸೀನು, ಸ್ವಾಮಿ , ದಿವ್ಯಾ ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";