ರಾಯಚೂರು, ಜು-20:
ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್‌ವಾದ) ವತಿಯಿಂದ ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ ವಿಚಾರ ಸಂಕಿರಣ ಜು.೨೨ ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.
ವಿಚಾರ ಸಂಕಿರಣಕ್ಕೆ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಇಂದಿರಾ ಕೃಷ್ಣಪ್ಪ, ಚಿಂತಕರು ಮತ್ತು ಹಿರಿಯ ಪತ್ರಕರ್ತರಾದ ದಿನೇಶ ಅಮೀನ್ ಮಟ್ಟು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಕರ್ನಾಟಕ ಪ.ಜಾತಿ ಮತ್ತು ಪ.ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಭಾಗವಹಿಸಲಿದ್ದಾರೆ.
ದಲಿತ ಚಳುವಳಿಯ ಅನುಭವಗಳನ್ನು ರಾಮದೇವ ರಾಕೆ, ವಿ.ನಾಗರಾಜ್, ಎನ್.ಮುನಿಸ್ವಾಮಿ, ಕುಂದೂರು ತಿಮ್ಮಯ್ಯ, ತುಮಕೂರು ಚಂದ್ರಶೇಖರಯ್ಯ ಯೋಜನಾ ಇಲಾಖೆ ಬೆಂಗಳೂರು ಹಂಚಿಕೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ದಸಂಸ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ವಹಿಸಲಿದ್ದಾರೆ.
ಮಾವಳ್ಳಿ ಶಂಕರ್ ಅವರ ಹುಟ್ಟುಹಬ್ಬಕ್ಕೆ ಅಭಿನಂದನಾ ನುಡಿಗಳನ್ನು ನಾಗರಾಜ್ ಎನ್, ರಮೇಶ ಡಾಕುಳಗಿ, ನಾಗಣ್ಣ ಬಡಿಗೇರ, ಮಲ್ಲೇಶ ಅಂಬುಗ, ಈರೇಶ್ ಹಿರೇಹಳ್ಳಿ, ನಿರ್ಮಲ ಆಡಲಿದ್ದಾರೆ.
ಮಧ್ಯಾಹ್ನ ೩-೩೦ಕ್ಕೆ ಜಂಗಮ ಕಲೆಕ್ಟೀವ್ಸ್ ತಂಡ ದಿಂದ ಪಂಚಮ ಪದ ನಾಟಕ ಪ್ರದರ್ಶನೆ ಗೊಳ್ಳಲಿದೆ. ನಿರ್ಧೇಶನವನ್ನು ಕೆ. ಚಂದ್ರಶೇಖರ್ ಮಾಡಿದರೆ ಸಿದ್ದಾರ್ಥ ಚಿಮ್ಮ ಎಡ್ಲೆöÊ ಗಾಯನ ಹಾಡಿದ್ದಾರೆ.