ರಾಯಚೂರು: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲತೆ ಖಂಡಿಸಿ ಎಸ್ಡಿಪಿಐ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರದಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿ ಯಾಗಿ ಅಧಿಕಾರವಹಿಸಿಕೊಂಡಿದ್ದು, ದೇಶದಲ್ಲಿ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಹತ್ಯೆಗಳು, ಶೋಷಣೆ ಮತ್ತು ಮುಸ್ಲಿಮರ ಅಂಗಡಿ ಲೂಟಿ ಮಾಡುವ ಹೀನ ಕೃತ್ಯಗಳು ನಡೆಯುತ್ತಿರುವುದನ್ನು ಖಂಡಿಸಿದರು.
ಛತ್ತೀಸಘಡದಲ್ಲಿ ಮೂವರು ಮುಸ್ಲಿಂ ಹುಡುಗರ ಮೇಲೆ ಗೋರಕ್ಷಣೆ ಹೆಸರಿನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಗುಜರಾತಿನ ಮುಸ್ಲಿಂ ಮಹಿಳೆಗೆ ಸರ್ಕಾರವೇ ನೀಡಿದ್ದ ಮನೆಗೆ ಪ್ರವೇಶಿಸಲು ಸ್ಥಳೀಯರು ತೊಂದರೆ ನೀಡುತ್ತಿದ್ದಾರೆ.
ಮಧ್ಯಪ್ರದೇಶದ ಮುಸ್ಲಿಂ ಮನೆಯಲ್ಲಿ ದನದ ಮಾಂಸ ದೊರಕಿತು ಎಂಬ ಆರೋಪದ ಹಿನ್ನಲೆ ಯಲ್ಲಿ ಆ ಬೀದಿಯ ಮುಸ್ಲಿಮರಿಗೆ ಸೇರಿದ ೧೩ ಮನೆಗಳನ್ನು ದ್ವಂಸ ಮಾಡಲಾಗಿದೆ, ಹಿಮಾಚಲ ಪ್ರದೇಶದಲ್ಲಿ ಬಕ್ರೀದ್ ದಿನ ಪ್ರಾಣಿ ಹತ್ಯೆಯಾಗಿದೆ ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಗೆ ಸೇರಿದ ಬಟ್ಟೆ ಅಂಗಡಿಯನ್ನು ದ್ವಂಸ ಮಾಡಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಎಚ್ಚೆತ್ತುಕೊಂಡು ದೇಶದಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆ ದರೋಡೆಗಳನ್ನು ನಿಯಂತ್ರಣ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸೈಯದ್ ಇರ್ಫಾನ್ ಪಾಷಾ ಸೇರಿದಂತೆ ಅನೇಕರು ಇದ್ದರು.
ಮುಸ್ಲಿಂರ ಮೇಲೆ ಹೆಚ್ಚುತ್ತರಿವ ಹಲ್ಲೆ,ಹತ್ಯೆ,ಲೂಟಿ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ
