ರಾಯಚೂರು: ಮಾನ್ವಿ ಹತ್ತಿರದ ಕಪಗಲ್ ಕ್ರಾಸ ಬಳಿ ಶಾಲಾ ಬಸ್ ದುರಂತದ ವಿಷಯ ನೋವು ತಂದಿದೆ ಎಂದು ಸಹರಾ ಅಲ್ಪಸಂಖ್ಯಾತ ಶಾಲಾ ವ್ಯವಸ್ಥಾಪಕ ಗ್ರೂಪ ಜಿಲ್ಲಾಧ್ಯಕ್ಷರಾದ ಮೊಹಮದ ಅಬ್ದುಲ್ ಹೈ ಫೀರೋಜ್ ತಿಳಿಸಿದ್ದಾರೆ.
ಅವರು ರೀಮ್ಸ್ ಆಸ್ಪತ್ರೆಗೆ ಸಹರಾ ಸದಸ್ಯರ ಜೊತೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ವೈದ್ಯರನ್ನು ಕಂಡು ಮಕ್ಕಳ ಆರೋಗ್ಯದ ಮಾಹಿತಿ ಪಡೆದರು. ಸೂಕ್ತ ಚಿಕಿತ್ಸೆಗೆ ಕೋರಿದರು.
ಈ ಅಪಘಾತದಲ್ಲಿ ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದು, ಹಲವು ವಿದ್ಯಾರ್ಥಿಗಳ ಮೂಳೆಗಳು ಮುರಿದಿದ್ದು, ಆಘಾತದ ವಿಷಯ. ಶಿಕ್ಷಕರ ದಿನಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಇದು ಅಷ್ಟು ಬೇಗ ಮಾಸಲಾಗದ ನೋವಾಗಿದೆ. ತೀರಿಹೋದ ಮಕ್ಕಳ ಆತ್ಮಕ್ಕೆ ದೇವರು ಶಾಂತಿ ದಯಪಾಲಿಸಲಿ, ಗಾಯಾಳು ಮಕ್ಕಳು ಬೇಗ ಚೇತರಿಸಿಕೊಳ್ಳಲಿ. ಮಕ್ಕಳಿಗೆ ರಿಮ್ಸ್ ನಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿರುವುದು ದುಃಖದ ನಡುವೆ ಅಲ್ಪ ಸಂತಸದ ವಿಚಾರವಿದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಕ್ಬಾಲ್, ಶೇಕ ಮಹಬೂಬ,ಮೋಸಿನ ಜಮಾಲ,ಸೈಯದ ಜಫರ ಮೋಹಿನುದ್ದೀನ್,ಸೋಹೆಲ್ ಅತೀಫ ಮತ್ತು ಅದಾನ್ ಮಂಜರ ಇದ್ದರು.