ರಾಯಚೂರು,ಮೇ.೩೦ : ಇಚ್ಛಿತ ವಿಕಲತೆ(ಸ್ಕಿಜೋಫ್ರಿನಿಯಾ) ರೋಗ ಲಕ್ಷಣಗಳು ಕಂಡುಬAದಲ್ಲಿ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವ ಮೂಲಕ ಖಾಯಿಲೆಯನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ಹೇಳಿದರು.
ಅವರು ಮೇ.೩೦ರ(ಗುರುವಾರ) ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೊಗ್ಯ ಸಂಘ( ಮಾನಸಿಕ ಆರೋಗ್ಯ ವಿಭಾಗ) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರಕ್ಷಕ, ಕಾರಾಗೃಹ ಇಲಾಖೆ, ಅಬಕಾರಿ ಇಲಾಖೆ ಹಾಗೂ ರಿಮ್ಸ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರಿನಿಯಾ ದಿನಾಚರಣೆಯಂಗವಾಗಿ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುನುಷ್ಯನ ಮಾನಸಿಕ ಭಾವನೆಗೆ ತೊಂದರೆ ನೀಡುವುದೇ ಮಾನಸಿಕ ಖಾಯಿಲೆಯಾಗಿದ್ದು, ಸ್ಕಿಜೋಫ್ರಿನಿಯಾ ಒಂದು ಮಾನಸಿಕ ಖಾಯಿಲೆಯಾಗಿದ್ದು, ಇದು ಯುವಕರಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಈ ಖಾಯಿಲೆಯು ಹಂತ ಹಂತವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಖಾಯಿಲೆಯನ್ನು ಕಂಡು ಹಿಡಿದು ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಖಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
ಈ ಖಾಯಿಲೆಯು ಹೆಚ್ಚಾಗಿ ಅನುವಂಶಿಕವಾಗಿ ಬರುತ್ತದೆ. ಇದನ್ನು ಹೊರತುಪಡಿಸಿ ಖಾಯಲೆಯು ಸುತ್ತಮುತ್ತಲಿನ ವಾತವರಣದಿಂದ ಬರುವ ಸಾಧ್ಯತೆಗಳಿವೆ. ಮತ್ತು ಮೆದುಳಿನಲ್ಲಿರುವ ರಾಸಾಯಿನಿಕಗಳ ವ್ಯತ್ಯಾಸದಿಂದಲೂ ಈ ಖಾಯಿಲೆ ಉಂಟಾಗಬಹುದು. ಇದರಿಂದ ವ್ಯಕ್ತಿಯಲ್ಲಿ ಸಂಶಯಗಳು ಉಂಟಾಗುತ್ತವೆ ಈ ಕಾರಣದಿಂದ ಅವರು ಸಮಾಜದಿಂದಲೂ ದೂರ ಉಳಿಯುತ್ತಾರೆ. ಆದ್ದರಿಂದ ಖಾಯಿಲೆಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆಯಿದೆ ಎಂದರು.
ಇದೇ ವೇಳೆ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ ಅವರು ಮಾತನಾಡಿ, ಸ್ಕಿಜೋಫ್ರಿನಿಯಾ ಖಾಯಿಲೆಯು ಗರ್ಭಿಣಿ ಮಹಿಳೆಯರಲ್ಲಿ ಬರುವ ಸಾಧ್ಯತೆಗಳಿದ್ದು, ಗರ್ಭಿಣಿ ಮಹಿಳೆಯರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಹೆಚ್ಚು ಮಾನಸಿಕ ಆರೋಗ್ಯ ಶಿಬಿರಗಳನ್ನು ನಡೆಸುವಂತೆ ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋ ವೈದ್ಯರಾದ ಮನೋಹರ್.ವೈ ಪತ್ತಾರ ಅವರು ಉಪನ್ಯಾಸ ನೀಡಿ, ಜನಸಂಖ್ಯೆಯ ಕೇವಲ ಶೇ.೧.೫ ರಷ್ಟು ಜನರಲ್ಲಿ ಸ್ಕಿಜೋಫ್ರಿನಿಯಾ ಖಾಯಿಲೆ ಕಂಡುಬರುತ್ತದೆ. ಈ ವರ್ಷದ ಘೋಷವಾಕ್ಯದಂತೆ ಸ್ಕಿಜೋಫ್ರಿನಿಯಾ ಖಾಯಿಲೆಯನ್ನು ಸಮುದಾಯದ ಶಕ್ತಿಯಿಂದ ಗುಣಪಡಿಸಬಹುದಾಗಿದೆ. ಸಮಾಜದಲ್ಲಿ ಖಾಯಿಲೆಯ ಲಕ್ಷಣವಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಲ್ಲಿ ಆ ವ್ಯಕ್ತಿ ಸಮಾಜದಲ್ಲಿ ಉತ್ತಮವಾದ ಜೀವನ್ನು ನಡೆಸುತ್ತಾನೆ ಎಂದರು.
ಈಗಾಗಲೇ ಇಲಾಖೆಯಿಂದ ಮತ್ತು ಮಾನಸಿಕ ರೋಗ ಕಾರ್ಯಕ್ರಮದಡಿಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾನಸಿಕ ರೋಗಗಳನ್ನು ನಿಯಂತ್ರಿಸಲು ಮನೋಚೈತನ್ಯ ಕಾರ್ಯಕ್ರಮದಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಂದು ರಾಷ್ಟç ಮುಂದುವರೆಯಲು ಪ್ರತಿಯೊಬ್ಬರ ಮಾನಸಿಕ ಸ್ಥಿತಿಗತಿ ಉತ್ತಮವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕುಷ್ಠರೋಗ ನಿವರಣಾಧಿಕಾರಿ ಡಾ.ಯಶೋಧಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ, ಜಿಲ್ಲಾ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿಧ್ದರು.