ಅಫಜಲಪುರ: ತಾಲೂಕಿನ ರ‍್ಜುಣಗಿ ತಾಂಡಾದಲ್ಲಿ ಕಳೆದ ಎರಡು ತಿಂಗಳಿಂದ ವಿಪರೀತ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ ಇದರಿಂದ ವಿವಿಧ ರೋಗಗಳು ಹರಡುವ ಭೀತಿ ಎದುರಾಗಿದರಿಂದ ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಾಂಡಾದ ನಿವಾಸಿ ಹಾಗೂ ಸಮಾಜೀಕ ಕರ‍್ಯರ‍್ತ ಶಶಿಕಾಂತ್ ಚವ್ಹಾಣ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಮನೆಗಳ ಮುಂದೆ ಚರಂಡಿ ನೀರು ಹರಿದು ಜಮಾವಣೆಗೊಂಡು ನೀರು ಗಬ್ಬು ವಾಸನೆ ಬರುತ್ತಿದೆ ಇದರಲ್ಲಿ ಸೊಳ್ಳೆಗಳು ಹೆಚ್ಚಳವಾಗಿ ಮನುಷ್ಯನನ್ನು ಕಚ್ಚುತ್ತಿವೆ ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಈ ಸಮಸ್ಯೆ ಇಷ್ಟಲ್ಲಾ ಇದ್ದರೂ ಗ್ರಾಪಂ ಜನಪ್ರತಿನಿಧಿಗಳು, ಪಿ.ಡಿ.ಒ ಅಧಿಕಾರಿಗಳು ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪರೀತ ಸೊಳ್ಳೆ ಕಡಿತದಿಂದ, ಮಲೇರಿಯಾ , ಡೆಂಗ್ಯೂ , ಚಿಕೂನ್‌ಗುನ್ಯಾ , ಹಳದಿ ಜ್ವರ , ಈ ರೋಗಗಳು ಸೊಳ್ಳೆಗಳಿಂದ ಹರಡುತದೆ. ಹೀಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಬಡದಾಳ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಜಾಗೃತಿಯ ಮೂಡಿಸಿ ಹಾಗೂ ಔಷಧಿ ಹಾಗೂ ಪೌಡರನ್ನು ನಾಲೆ ಹಾಗೂ ಮನೆಯ ಅಕ್ಕ ಪಕ್ಕದಲ್ಲಿ ಸಿಂಪಡಿಸುವ ಕರ‍್ಯ ಅತಿ ಶೀಘ್ರದಲ್ಲಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.