ಸಿರುಗುಪ್ಪ.ಮೇ.೦೨:- ಮೇ.೦೭ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಂತಿಯುತ ಮತದಾನ ನಡೆಯಲು ಬಿಗಿ ಭದ್ರತೆ ಕೈಗೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
ಡಿ.ವೈ.ಎಸ್.ಪಿ.ವೆಂಕಟೇಶ್ ಮಾತನಾಡಿ ಮೇ.೦೭ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಸಾರ್ವಜನಿಕರು ಮತಗಟ್ಟೆಗೆ ಬಂದು ನಿರ್ಭೀತಿಯಿಂದ ಮತದಾನ ಮಾಡುವಂತೆ ಪ್ರೇರೇಪಿಸಲು ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರದ ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಪಥಸಂಚಲನ ಕೆ.ಇ.ಬಿ. ಕಛೇರಿ, ಗಾಂಧಿವೃತ್ತ, ಅಂಬೇಡ್ಕರ್ ವೃತ್ತ, ಟಿಪ್ಪುಸುಲ್ತಾನ್ ವೃತ್ತ, ಹಳೇ ದೇಶನೂರು ರಸ್ತೆ, ಆದೋನಿ ರಸ್ತೆಯಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಸಿ.ಪಿ.ಐ.ಗಳಾದ ಹನುಮಂತಪ್ಪ, ಸುಂದರೇಶ್ ಹೊಳೆಯಣ್ಣನವರ್, ಪಿ.ಎಸ್.ಐ.ಗಳಾದ ತಿಮ್ಮಣ್ಣ ನಾಯಕ, ತಾರಾಬಾಯಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.