ಸಿAಧನೂರು.ಸ.೧೨; ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (ಐಯರ್ಲಾ) ನೇತೃತ್ವದಲ್ಲಿ ಸೆಪ್ಟೆಂಬರ್ ೧೦ ರಿಂದ ೨೩ ವರೆಗೆ ನಡೆಯುವ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯಾದ್ಯಂತ ಜನ ಜಾಗೃತಿ ಆಂದೋಲನಕ್ಕೆ ಬೆಂಬಲಿಸಿ ಎಂದು ತಾಲೂಕು ಘಟಕದ ಸಂಚಾಲಕ ಆರ್.ಎಚ್. ಕಲಮಂಗಿ ಕರೆ ನೀಡಿದರು.
ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ಭೂಮಿಯಲ್ಲಿ (ಅರಣ್ಯ ಭೂಮಿ ಸೇರಿದಂತೆ) ರೈತರ ಸಾಗುವಳಿಗಳನ್ನು (ಬಗೈರ್ ಹುಕುಂ ಸಾಗುವಳಿ) ಸಕ್ರಮ ಗೊಳಿಸಬೇಕು. ಭೂ ಕಬಳಿಕೆ ತಡೆ ಕಾಯ್ದೆಯಡಿ ಸರ್ಕಾರೀ ಭೂಮಿಯಲ್ಲಿ ಮನೆ ಕಟ್ಟಿರುವ ಹಾಗೂ ಕೃಷಿ ಮಾಡುತ್ತಿರುವವರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಪ್ರತಿ ಗ್ರಾಮವಾರು ಸರ್ವೆ ನಡೆಸಿ, ಮನೆ, ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ನಿವೇಶನ, ಭೂಮಿ ಹಂಚಬೇಕು. ಫಾರಂ ನಂ.೫೭ ಪುನಃ ಅರ್ಜಿ ಹಾಕಲು ಅವಕಾಶ ಒದಗಿಸಬೇಕು. ಉದ್ಯೋಗ ಖಾತರಿ ೨೦೦ ದಿನಗಳ ಕೆಲಸ ನೀಡಿ, ೬೦೦ ಕೂಲಿ ಹೆಚ್ಚಿಸಿ, ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವೆ ವೇತನ ೩ ಸಾವಿರ ಹೆಚ್ಚಿಸಬೇಕು. ಕೃಷಿ ಮತ್ತು ಗ್ರಾಮೀಣ ಕಾರ್ಮಿಕರು ಪ್ರತಿಭಟನೆ ಹೋರಾಟಕ್ಕೆ ಬೆಂಬಲ ನೀಡಿ ಅವರ ಬೇಡಿಕೆಗಳು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸೋಣ ಎಂದರು.
ಪೋಸ್ಟರ್ ಬಿಡುಗಡೆ : ಸೆಪ್ಟೆಂಬರ್ ೧೦ ರಿಂದ ೨೩ ರವರೆಗೆ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯಾದ್ಯಂತ ಜನ ಜಾಗೃತಿ ಆಂದೋಲನದ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೋಸ್ಟರ್ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಕೊಂಡೆ, ಹನುಮಂತ ಟೈಲರ್, ಮಂಜುನಾಥ, ಶಿವಪ್ಪ, ಮುರುಗೇಶ್, ಪಾಷಾ ಸಾಬ್, ಬಾಬರ್ ಪಟೇಲ್, ಹುಸೇನಪ್ಪ, ನವೀನ್ ಮುಂತಾದವರಿದ್ದರು.