ಆರ್‌ಡಿಎ ಪ್ರಥಮ ಸಭೆ: 14 ಕೋ. ಅಂದಾಜಿನ ಬಜೆಟ್‌ಗೆ ಅನುಮೋದನೆ

Eshanya Times

ರಾಯಚೂರು,ಜೂ.27: ರಾಯಚೂರು ನಗರಾಭಿವೃದ್ದಿ ಪ್ರಾಧಿಕಾರ (ಆರ್‌ಡಿಎ) ಪ್ರಥಮ ಸಭೆ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಆರ್‌ಡಿಎ ಕಛೇರಿಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳ 14 ಕೋ. ರೂ. ಬಜೆಟೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಕೆಲ ದಿನಗಳಿಂದ ಬಾಕಿ ಉಳಿದಿದ್ದ ಬಜೆಟ್ ಮಂಡಿಸಲಾಯಿತು. ನಗರ ಸೌಂದರ್ಯಿಕರಣ, ಬೀದಿ ದೀಪಗಳ ಅಳವಡಿಕೆ, ಉದ್ಯಾನಗಳ ಅಭಿವೃದ್ದಿ ಅನುದಾನ ಕಾಯ್ದಿರಿಸಿದ ಬಜೆಟ್ ಮಂಡಿಸಲಾಯಿತು.
ಶಾಸಕ ಡಾ.ಶಿವರಾಜ್ ಪಾಟೀಲ ಮಾತನಾಡಿ, ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚ ಹಾಗೂ ಸಂಗ್ರಹವಾಗುವ ಆದಾಯ ಮೂಲಗೂ ಸೇರಿದಂತೆ ಸರಕಾರದ ಅನುದಾನ ಸದ್ಭಳಕೆಗೆ ಪ್ರದಿಕಾರಿಗಳು ವಿಶೇಷ ಒತ್ತು ನೀಡಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ನಗರದ ಅಭಿವೃದ್ದಿ ರೂಪಿಸಲಾಗಿದ್ದ ಮಾಸ್ಟರ್ ಪ್ಲಾನ್ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಿಸಿಕೊಳ್ಳಲು ಅಗತ್ಯ ಬದಲಾವಣೆಗೆ ಪರಿಷ್ಕೃತ ಮಾಸ್ಟರ್ ಪ್ಲಾನ್ ಸಿದ್ದಪಡಿಸುವಂತೆ ಸಹ ಸೂಚಿಸಿದರು.
ವಿಧಾನ ಪರಿಷತ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ನಗರದ ಜನ ಸಂಖ್ಯೆಗೆ ಅನುಗುಣವಾಗಿ ದೂರ ದೃಷ್ಠಿ ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ತಿಳಿಸಿದರು. ಈಗಾಗಲೇ ರೂಪಿತವಾಗಿವರುವ ಮಾಸ್ಟರ್ ಪ್ಲಾನ್‌ನಲ್ಲಿರುವ ಬದಲಾವಣೆಗಳನ್ನು ಮತ್ತೊಮ್ಮೆ ಸಭೆಯಲ್ಲಿ ವಿಸ್ತೃತ ಚರ್ಚಿಸಿ ಯೋಜನೆ ರೂಪಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಆನಧಿಕೃತ ಲೇಔಟ್‌ಗಳನ್ನು ಪತ್ತೆ ಮಾಡಿ ಜನರಿಗೆ ಮೋಸವಾಗದಂತೆ ನಿವಾಗವಹಿಸಲು ಸೂಚನೆ ನೀಡಿದರು. ಅಲ್ಲದೇ ಹೊಸದಾಗಿ ವಸತಿ ವಿನ್ಯುಆಸಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಿಗೆ ಸಭೆ ಅನುಮೋದನೆ ನೀಡಿತು. ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಮಾತನಾಡಿ, ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಕುರತು ಮಾಹಿತಿ ನೀಡುವಂತೆ ಮತ್ತು ಸರಕಾರ ದಿಂದ ಇನ್ನಷ್ಟು ಅನುದಾನ ಬಿಡುಗಡೆಗೆ ಮನವಿ ಮಾಡಿದರು.
ಸಭೆಯಲ್ಲಿ ಆಯುಕ್ತರಾದ ಜಿಲಾನಿ ಸದಸ್ಯರಾದ ನರಸಿಂಹಲು ಮಾಡಗಿರಿ, ದತ್ತಾತ್ರೆಯ, ಹೇಮಲತಾ, ಬೂದೆಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";