ರಾಯಚೂರು:
ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಹಿಡಿದು ಇಟ್ಟುಕೊಳ್ಳುವ ಮೂಲಕ ಹಾಗೂ ಪಕ್ಷೇತರ ಸದಸ್ಯರನ್ನು ತಮ್ಮಕಡೆ ಸಳೆಯುವ ಮೂಲಕ ರಾಜಕೀಯ ರಣತಂತ್ರ ಹೂಡಿ ಅಧ್ಯಕ್ಷರಾಗಿ ನರಸಮ್ಮ ನರಸಿಂಹಲು ಮಾಡಗೇರಿ ಉಪಾಧ್ಯಕ್ಷರಾಗಿ ಸಾಜೀದ ಸಮೀರ್ ಆವಿರೋಧ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದಿ.೨೮ ರಂದು ನಗರಸಭೆ ಸಭಾಂಗಣಲದಲಿ ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪ.ಜಾತಿ (ಮಹಿಳೆ) ಮೀಸಲಾಗಿದ ಅಧ್ಯಕ್ಷ ಸ್ಥಾನ ನರಸಮ್ಮ ನರಸಿಂಹಲು ಮಾಡಗಿರಿ ಇವರ ಸದಸ್ಯರಾದ ಬಸವರಾಜ್ ದರೂರು ಮತ್ತು ಬಿ.ರಮೇಶರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಪತ್ರವನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬಿ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಹಾಗೂ ಪಕ್ಷೇತ್ರ ಸದಸ್ಯ ಸಾಜೀದ್ ಸಮೀರ್ ಸಹ ಸದಸ್ಯರಾದ ಜಿಂದಪ್ಪ ಮತ್ತು ಎಂ.ಪವನ ಕುಮಾರರೊಂದಿಗೆ ತೆರಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ನಿಗದಿತ ಕಾಲಮಿತಿಯಲ್ಲಿ ಯಾವುದೇ ಅಭ್ಯರ್ಥಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಹಿಬೂಬಿ ಅವರು ಅಧ್ಯಕ್ಷರಾಗಿ ನರಸಮ್ಮ ನರಸಹಿಂಹಲು ಮಾಡಿಗಿರಿ ಹಾಗೂ ಉಪಾಧ್ಯಕ್ಷರಾಗಿ ಸಾಜೀದ್ ಸಮೀರ್ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ರಾಯಚೂರು ನಗರಸಭೆಯ ವಿವಿಧ ವಾರ್ಡ್ಗಳ ಸದಸ್ಯರು ಹಾಗೂ ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ ಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.
ಬಹುಮತ ಸಂಖ್ಯಾಬಲದ ಕೊರತೆಯಿಂದ ಬಿಜೆಪಿ ಪಕ್ಷದ ಶಾಸಕರು ಮತ್ತು ಸದಸ್ಯರು ಸ್ಪರ್ಧೆಯಿಂದ ದೂರು ಉಳಿದಿದ್ದರು.