ವಾರ್ಡ ನಂ ೩೧ ಸಿಯಾತಲಾಬ್ ನಲ್ಲಿ ಸ್ವಚ್ಚತಾ ಅಭಿಯಾನ
ರಾಯಚೂರು,ಮಾ.10 :
ನಾವು ನಮ್ಮ ಮನೆ, ನಮ್ಮ ಬಡಾವಣೆಯ ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಸುಚಿತ್ವದಿಂದ ಕಾಪಾಡಿದಾಗ ಮಾತ್ರ ರೋಗರುಜನಗಳನ್ನು ತಡೆಗಟ್ಟಲು ಸಾಧ್ಯ. ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಜಾಪೀತ ಬ್ರಹ್ಮಕುಮಾರಿಸ್ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಯುವಮುಖಂಡರಾದ ರವಿ ಬೋಸರಾಜು ಅವರು ಅಭಿಪ್ರಾಯ ವ್ಯಕ್ತಿಪಡಿಸಿದರು.
ನಗರಸಭೆಯ ವತಿಯಿಂದ ವಾರ್ಡ ನಂ ೩೧ ಸಿಯಾತಲಾಬ್ ಬಡಾವಣೆಯಲ್ಲಿ ಆಯೋಜಿಸಿದ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಸಿಯಾತಲಾಬ್ ಬಡಾವಣೆಯಲ್ಲಿ ನಗರಸಭೆಯ ಸಿಬ್ಬಂದಿಗಳನ್ನು ಕರೆದು ಅಗತ್ಯವಿರುವಲ್ಲಿ ಹೆಚ್ಚಿನ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿ ಪೌರ ಕಾರ್ಮಿಕರಿಗೆ ಸ್ವಚ್ಛತೆಗಾಗಿ ಬೇಕಾದ ಉಪಕರಣಗಳ ಜೊತೆಗೆ ಕಾರ್ಮಿಕರಿಗೆ ಸಮವಸ್ತç, ಬೂಟ್, ಗ್ಲೌಸ್ ಸೇರಿದಂತೆ ಕಾರ್ಮಿಕ ಕಿಟ್ ನೀಡುವಂತೆ ತಿಳಿಸಿದರು.
ನಂತರ ಬಡಾವಣೆಯ ಜನರೊಂದಿಗೆ ಹಾಗೂ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಿಂದ ೨ ಸಾವಿರ ರೂ ಹಣ, ಸಿದ್ದರಾಮಯ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ, ೨೦೦ ಯುನಿಟ್ ವಿದ್ಯುತ್, ಉಚಿತ ಬಸ್ ಸೌಕರ್ಯದ ಕುರಿತು ಮಹಿಳೆಯರು ನಮಗೆ ತುಂಬಾ ಅನುಕೂಲವಾಗಿದೆ, ಈ ಹಿಂದೆ ಯಾವ ಸರ್ಕಾರವು ಇಂತಹ ಬಡ ಜನರ ಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಸರ್ಕಾರದ ಪರವಾಗಿ ಪ್ರಸಂಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ, ತಿಮ್ಮಾರಡ್ಡಿ, ನಗರಸಭೆ ಸದಸ್ಯರಾದ ಭೀಮರಾಯ, ಹರಿಬಾಬು, ರಮೇಶ್ ಯಾದವ್, ವಿನೋದ್ ಕುಮಾರ್, ಮಾರಪ್ಪ, ತಾನಾಜಿ, ರವಿ ರಾಂಪೂರ್, ಸೂರಿ ಡ್ರೆಸಸ್, ಅತೀಕ್, ಮುನಿರಡ್ಡಿ, ಬಸವರಾಜ ಗೋಪಾಲ್, ನಗರಸಭೆ ಪೌರ ಕಾರ್ಮಿಕರು, ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
ಸ್ವಚ್ಛ ಮತ್ತು ಸುಂದರ ನಗರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ -ರವಿ ಬೋಸರಾಜು
