ರಾಯಚೂರು,ಜು,18: ರಾಜ್ಯ ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಿ, ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ದ ಘೋಷಣೆ ಕೂಗಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಘೋಷಣೆ ಕೂಗಿದರು.
ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ರೈತರು ಕೃಷಿ ಪಂಪೆಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಲು ಸೂಚಿಸಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು, 2 ರಿಂದ 3 ಲಕ್ಷ ರೂ. ರೈತರು ಭರಿಸಲು ಸಾಧ್ಯವಾಗುವುದಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಕಳೆದ ವರ್ಷ ಏಪ್ರೀಲ್ ನಿಂದ ಇಲ್ಲಿಯವರೆಗೆ 1182 ಜನ ರೈತರು ಆತ್ಯಹತ್ಯೆ ಮಾಡಿಕೊಂಡಿದ್ದು, ಅತಿ ಹೆಚ್ಚು ಯುವ ರೈತರಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರಕಾರ ರೈತರಲ್ಲಿ ಆತ್ಮಸ್ಥೆರ್ಯ ಹೆಚ್ಚಿಸಲು ಮುಂದಾಗಬೇಕು, ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಳಿಸಿ ರಾಜ್ಯ ಸರಕಾರವೇ ಬೆಂಬಲ ಬೆಲೆ ನಿಗಧಿಪಡಿಸಬೇಕು, ಬ್ಯಾಂಕ್‌ಗಳು ಬರಗಾರಲ ಪರಸ್ಥಿತಿಯಲ್ಲಿಯೂ ಒತ್ತಾಯ ಸಾಲ ವಸೂಲಾತಿ ಮಾಡವದನ್ನು ತಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯತು.
ಜೋಳ,ರಾಗಿ ಖರೀದಿ ಮಾಡಿದ್ದು, ಬಾಕಿಯಿರುವ ಹಣವನ್ನು ರೈತರಿಗೆ ಪಾವತಿಸಬೇಕು, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು, ಭೂ ಸುಧಾರಣಾ ತಿದ್ದುಪಡೆ ಕಾಯ್ದೆ, ಗೋ ಹತ್ಯೆ ನಿಷೇದ ಕಾಯ್ದೆಯನ್ನು ಹಿಂಪಡೆಯಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಯಿತು.
ಧರಣಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗದಾಳ, ವೆಂಕಪ್ಪ ಕಾರಬಾರಿ, ಮಲ್ಲಣ್ಣ ದಿನ್ನಿ, ಬಸನಗವಢ ಮಲ್ಲಿಗೆ ಮಡಗು, ಲಿಂಗಾರೆಡ್ಡಿ ಪಾಟೀಲ್, ಗೋವಿಂದ ನಾಯಕ ಗಾಣಧಾಳ, ಮಲ್ಲಮ್ಮ ಹುನಕುಂಟಿ, ಸಿದ್ದಯ್ಯ ಸ್ವಾಮಿ ಮಾನವಿ, ಹಚ್ಚಪೀರ ಸಾಬ ಮಲ್ದಕಲ್, ಉಮಣ್ಣ ಮಲದಕಲ್, ದೇವರಾಜನಾಯಕ, ಬ್ರಹ್ಮಯ್ಯ ಆಚಾರಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.