ಸಿಂಧನೂರು.ಜ.11: ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊ0ಡಿರುವ ಸುತ್ತಲಿನ ರಾಜ್ಯಗಳಿಂದ ವಲಸೆ ಬಂದವರಿ0ದ ರಾಜ್ಯದಲ್ಲಿ ಪರ ಭಾಷೆ ವ್ಯಾಮೋಹ ಹೆಚ್ಚುತ್ತಿದೆ. ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಸೇರಿ ಇತರೆ ಭಾಷೆಯನ್ನು ಪ್ರಧಾನವಾಗಿಟ್ಟುಕೊಂಡು ಬೋಧನೆ ನಡೆದಿದ್ದು, ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಕನ್ನಡದ ಉಳುವಿನ ವಿಚಾರವಾಗಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸದೆ ಇನ್ನು ಜಾಗೃತವಾಗಬೇಕಿದೆ, ಈ ಬಗ್ಗೆಯೂ ರಾಜ್ಯದಲ್ಲಿ ಉದಯವಾಗಿರುವ ಕನ್ನಡ ಪರ ಸಂಘಟನಾಕಾರರು ಗಮನ ಹರಿಸಬೇಕು, ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ sಸದಾಕಾಲ ಪರಿಷತ್ ಜಾಗೃತಿ ಮೂಡಿಸುತ್ತಿದೆ ಎಂದು ಉದ್ಯಮಿ ರಾಜೇಶ ಹಿರೇಮಠ ಹೇಳಿದರು.
ಅವರು ಶನಿವಾರದಂದು ನಗರದ ಪಟೇಲವಾಡಿಯ ಸರಗಣಾಧಿಶ್ವರ ಶಿವಪೂಜಾ ದೇವರಮಠದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಡೆದ 2024-25ನೇ ಸಾಲಿನ ದತ್ತಿ ಉಪನ್ಯಾಸ ಹಾಗೂ ಕನ್ನಡ ಭಾಷೆ, ನೆಲ, ಜಲ ಕುರಿತು ದಾರ್ಶನಿಕರ ಮಾಸಿಕ ಕವಿಗೋಷ್ಠಿಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಜ್ಯದ ಮುಂಚೂಣಿಯಲ್ಲಿದೆ. ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷರಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಿಂಧನೂರಿನ ಹೆಸರು ಮುಂಚೂಣಿಗೆ ತಂದಿದ್ದಾರೆ, ಲಿಂ.ಶ್ರೀ ಕರಿಬಸವಯ್ಯ ಸರಗಣಾದಿಶ್ವರ ಶಿವಪೂಜೆ ದೇವರಮಠ ಸ್ಮಾರಕ ದತ್ತಿ, ಸಿದ್ದಪ್ಪ ಬೀರಪ್ಪ ಶಂಭೋಜಿ ಗಲಗಲಿ ಸ್ಮಾರಕ ದತ್ತಿ, ಕೆ.ವಿಜಯಕುಮಾರ ಸ್ಮಾರಕ ದತ್ತಿ, ರತ್ನಂ ಮೋಟಾರ್ಸ್ ಲಿಮಿಟೆಡ್ ಸಿಂಧನೂರು ದತ್ತಿ ಹೆಸರಿನ ಸಂಗಯ್ಯತಾತ ಸರಗಣಾದಿಶ್ವರ ಮಠ, ಕೆ. ಚಂದ್ರಕಲಾ ಪಾಟೀಲ್, ಬೀರಪ್ಪ ಶಂಭೋಜಿ ನಿವೃತ್ತ ಶಿಕ್ಷಕರು, ಎಮ್.ರಾಮಕೃಷ್ಣ ತಂದೆ ವೆಂಕಟೇಶ್ವರಲು, ದತ್ತಿ ದಾನಿಗಳಾಗಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬ0ಧಿಸಿದ0ತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ, ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ದತ್ತಿಯ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ರಂಭಾಪುರಿ ಖಾಸಾ ಶಾಖಾಮಠ ಕರಿಬಸವ ನಗರದ ಸೋಮನಾಥ ಶಿವಚಾರ್ಯರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್ ದೇವದುರ್ಗ, ಬೀರಪ್ಪ ಶಂಭೋಜಿಯಚರು ಕನ್ನಡ ಭಾಷೆ, ನೆಲ, ಜಲ, ಹಾಗೂ ಚುಟುಕು ಸಾಹಿತ್ಯದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ವೇಳೆ: ಮರಿಸ್ವಾಮಿ ಹಿರೇಮಠ ವರ್ತಕರು, ಶಾಂತಪ್ಪ ಚಿಂಚರಕಿ ವರ್ತಕರು, ಅಮರೇಶ ಮಾಡಸಿರವಾರ ವರ್ತಕರು, ಸರೋಜಮ್ಮ ಸರಗಣಾದಿಶ್ವರ ಮಠ, ಆದಿ ಬಸವರಾಜ ಕೆ.ಹೊಸಳ್ಳಿ, ಲಕ್ಷಯ್ಯಸ್ವಾಮಿ ಬಾವಿಕಟ್ಟಿಮಠ, ದ್ರಾಕಾಯಿಣಿ ಮಾಲಿ ಪಾಟೀಲ ಗೋಮರ್ಸಿ, ಕಸಾಪ ಸದಸ್ಯರಾದ ಬಾಬರ್ ಪಟೇಲ್, ಶರಣಪ್ಪ ತೆಂಗಿನಕಾಯಿ, ಹಾಗೂ ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ ಹಿರೇಮಠ, ಸೇರಿದಂತೆ ಅನೇಕರಿದ್ದರು.