ಮಾನ್ವಿ,: ಮಾನ್ವಿ ಹಾಗೂ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಕೆಖಭಾಗದ ರೈತರ ಹೊಲಗಳಿಗೆ ಬರುವ ವಿತರಣಾ ಕಾಲುವೆಗಳಿಗೆ ಸರ‍್ಪಕ ನೀರನ್ನು ಒದಗಿಸುವುದು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ರಾಜಾವೆಂಕಟಪ್ಪನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮೈಲ್ ೬೯ರಲ್ಲಿ ನೀರಿನ ಮಾಪನವನ್ನು ಪುನರ್ ಪರಿಶೀಲಿಸಿ ನಿಗದಿತ ಪ್ರಮಾಣದಲ್ಲಿ ಕೆಳಭಾಗದ ರೈತರಿಗೆ ನೀರನ್ನು ಒದಗಿಸುವುದು, ಹಾಗೂ ಮೇಲ್ಭಾಗದಲ್ಲಿ ಅನಧಿಕೃತವಾಗಿ ನೀರಾವರಿಯಾಗಲ್ಪಟ್ಟ ೧.೫ ಲಕ್ಷ ಎಕರೆ ನೀರಾವರಿಗೊಳಪಟ್ಟ ರೈತರ ಜಮೀನುಗಳಿಗೆ ನೀರು ಹರಿಸುವುದು ಮತ್ತು ಅನಧಿಕೃತ ಪೈಪ್ ಗಳನ್ನು ತೆರುವುಗೊಳಿಸುವುದು. ಮಾನ್ವಿ ಕ್ಷೇತ್ರದ ಶಿಕ್ಷಣ ಇಲಾಖೆಯಲ್ಲಿ ಪ್ರಸುತ್ತ ಶೈಕ್ಷಣಿಕೆ ರ‍್ಷದಲ್ಲಿ ಶಿಕ್ಷಕರ ರ‍್ಗಾವಣೆಯಿಂದ ತೆರುವುಗೊಂಡ ಸ್ಥಳದಲ್ಲಿ ಶಿಕ್ಷಕರನ್ನು ನಿಯೋಜಿಸುವುದು. ಶಿಕ್ಷಕರ ರ‍್ಗಾವಣೆಯಿಂದ ಕಲ್ಯಾಣ ರ‍್ನಾಟಕ ಭಾಗದಲ್ಲಿ ಬರುವ ಈ ಕ್ಷೇತ್ರ ವಿದ್ಯರ‍್ಥಿಗಳ ವ್ಯಾಸಂಗಕ್ಕೆ ತೊಂದರೆ ಉಂಟಾಗಿ ಶೈಕ್ಷಣಿಕವಾಗಿ ಕುಂಠಿತಗೊಂಡಿರುತ್ತದೆ.
ಮಾನ್ವಿ ವಿಧಾನಸಭಾ ಕ್ಷೇತ್ರದ ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದಾಗಿ ಕ್ಷೇತ್ರದ ರೋಗಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಕೂಡಲೇ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಾಜಿಶಾಸಕ ರಾಜಾವೆಂಕಟಪ್ಪನಾಯಕ ಒತ್ತಾಯಿಸಿದರು.
ಈ ಸಂರ‍್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ತಾಲೂಕಾಧ್ಯಕ್ಷರಾದ ಈರಣ್ಣ ರ‍್ಲಟ್ಟಿ, ಮಲ್ಲಿಕರ‍್ಜುನಗೌಡ ಬಲ್ಲಟಗಿ, ಜಂಬುನಾಥ ಯಾದವ್, ಜಿ.ಲೋಕರೆಡ್ಡಿ, ಶರಣಪ್ಪ ಮೇದಾ, ಭಾಷಸಾಬ್, ಹೆಚ್.ಮೌನೇಶಗೌಡ, ರಾಜಾಆರ‍್ಶನಾಯಕ, ಪಿ.ರವಿಕುಮಾರ, ಸುಭಾನಬೇಗ್, ಮಲ್ಲಪ್ಪ ಹೂಗಾರ್, ಹನುಮಂತ ಭೋವಿ, ಶರಣಪ್ಪಗೌಡ ಮದ್ಲಾಪುರು, ವಿಜಯನಾಯಕ ಕೊಟ್ನೆಕಲ್, ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು, ಕರ‍್ಯರ‍್ತರು ಇದ್ದರು.