ಸುರಪುರ: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿಯ ಅಂಗಡಿ ಸಂಖ್ಯೆ ೫ರ ನಾರಾಯಣದಾಸ ಗೋಪಾಲದಾಸ ರಾಠಿ ಎನ್ನುವವರಿಗೆ ಸೇರಿದ ಕಿರಾಣಿ ಅಂಗಡಿಯ ಗೋದಾಮಿಗೆ ಮಳೆ ನೀರು ನುಗ್ಗಿ ಸುಮಾರು ೮ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನೀರಲ್ಲಿ ನೆನೆದು ಹಾಳಾಗಿರುವ ಘಟನೆ ನಡೆದಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿದಿದ್ದರಿಂದ ೩ನೇ ತಾರಿಖು ರಾತ್ರಿ ಸುರಿದ ಭಾರಿ ಮಳೆಗೆ ನೀರು ಗೋದಾಮಿನೊಳಗೆ ನುಗ್ಗಿದ್ದರಿಂದ ಗೋದಾಮಿನಲ್ಲಿದ್ದ ಅಕ್ಕಿ,ಬೇಳೆ,ಬೆಲ್ಲ,ಸಕ್ಕರೆ ಸೇರಿದಂತೆ ಅನೇಕ ವಸ್ತುಗಳು ನೀರಲ್ಲಿ ರಾತ್ರಿಯಿಡೀ ನೆನೆದಿದ್ದು ಎಲ್ಲಾ ಆಹಾರ ಧಾನ್ಯಗಳಿದ್ದ ಚೀಲಗಳು ನೆನೆದು ಸಂಪೂರ್ಣ ಹಾಳಾಗಿವೆ,ಬುಧವಾರ ಬೆಳಿಗ್ಗೆ ಬಂದು ನೋಡಿದಾಗ ಎಲ್ಲಾ ವಸ್ತುಗಳು ನೀರಲ್ಲಿ ನೆನೆದಿದ್ದು ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಿದ್ದು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಈ ಕುರಿತು ಸುರಪುರ ಠಾಣೆಗು ಮನವಿ ಸಲ್ಲಿಸಿ ತುಂಬಾ ನಷ್ಟವುಂಟಾಗಿದ್ದು ಸರಕಾರ ದಿಂದ ಪರಿಹಾರ ಕೊಡಿಸುವಂತೆ ವಿನಂತಿಸಿದ್ದಾರೆ.ಸ್ಥಳಕ್ಕೆ ಸುರಪುರ ಠಾಣೆಯ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.