ಜಿಲ್ಲೆಯು ಮಾನಸಿಕ ರೋಗದಿಂದ ಮುಕ್ತಮಾಡಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕ -ನ್ಯಾ.ಪ್ರಕಾಶ ಬನಸೊಡೆ

Eshanya Times

ಬೀದರ, ಅಕ್ಟೋಬರ್.10: ಪ್ರತಿಯೊಂದು ಮಾನಸಿಕ ರೋಗಿಗಳನ್ನು ಸಮಾಜದಲ್ಲಿ ಗೌರವ ಭಾವದಿಂದ ಕಾಣಬೇಕು, ಮಾನಸಿಕ ರೋಗಿಗಳನ್ನು ಕಂಡಲಿ ಸಂಬ0ಧ ಪಟ್ಟ ವಲಯದ ಪೊಲೀಸ್ ಅಧಿಕಾರಿಗಳು ನ್ಯಾಯಧೀಶರ ಮುಂದೆ ಹಾಜರು ಪಡಿಸಿ ಮಾನಸಿಕ ವಿಭಾಗದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಪ್ರಮಾಣಿಕ ಪ್ರಯತ್ನ ಮಾಡಬೇಕು. ಹಾಗೂ ಜಿಲ್ಲೆಯ ಸಾರ್ವಜಿನಿಕರು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಾಗ ಬೀದರ ಜಿಲ್ಲೆಯು ಮಾನಸಿಕ ರೋಗದಿಂದ ಮುಕ್ತಮಾಡಬಹುದು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೊಡೆ ಹೇಳಿದರು.
ಅವರು ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2024” ಘೋಷವಾಕ್ಯ “ಕೆಲದ
ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ”ಎಂಬ ಘೋಷಣೆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಎಮ್ ಪಾಟೀಲ್ ಮಾತನಾಡಿ, ಮಾನಸಿಕ ಆರೋಗ್ಯವನ್ನು ಕುರಿತು ಸಲಹೆಗೆ ಟೋಲ್ ಫ್ರೀ ನಂ 14416 ಗೆ ಕರೆ ಮಾಡಿ ಆಪ್ತ ಸಮಾಲೋಕರ ಮತ್ತು ಮನೋವೈದ್ಯರ ಸಲಹೆ ಪಡೆದುಕೊಳಬೇಕು ಎಂದು ಹೇಳಿದರು.
ಬೀದರ ಬ್ರೀಮ್ಸ ಆಸ್ಪತ್ರೆಯ ಮಾನಸಿಕ ಆರೋಗ್ಯ ಆರೋಗ್ಯ ವಿಭಾಗ ಮನೋವೈದ್ಯರಾದ ಡಾ. ರಾಘವೆಂದ್ರ ವಾಗೋಲೆ ಮಾತನಾಡಿ, ಆಧುನಿಕ ಯುಗದಲ್ಲಿ ಯುವಜನತೆ ಅತಿಯಾಗಿ ಮೊಬೈಲಯಿಂದ ಅನೇಕ ವಿದ್ಯಾರ್ಥಿಗಳು ದುಶ್ಸಚಟಗಳಿಂದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನೆ ನಾಶಮಾಡಿಕೊಳ್ಳುತ್ತಿದ್ದಾರೆ. ಸಮಿಕ್ಷೆಯ ಪ್ರಕಾರ 14-19 ವರ್ಷದ ಮಕ್ಕಳಲ್ಲಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಪ್ರತಿ ೫೫ ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಮಾನಸಿಕ ಕಾಯಿಲೆಗೆ ಒಳಗಾಗಿ ಆತ್ಮ ಹತ್ಯ ಮಾಡಿಕೊಳ್ಳುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ವನ್ನು ಕಾಪಾಡಿಕೋಳಲು ಪ್ರೋಟಿನ್ ಮತ್ತು ಕ್ಯಾಲ್ಸಿಯಮ್‌ಯುತ ಆಹಾರ ಸೇವಿಸಬೇಕು ವ್ಯಾಯಮ್ ಮತ್ತು ಧ್ಯಾನವನ್ನು ದಿನಚರಿಯಾಗಿ ಮಾಡಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಬೀದರ ಬ್ರೀಮ್ಸ್ ಆಸ್ಪತ್ರೆಯ ಡಾ.ಅನಿಲಕುಮಾರ ಎಕಲಾರೆ, ಜಿಲ್ಲಾ ಮಾನಸಿಕ ವಿಭಾಗದ ಮನೋಶಾಸ್ತçಜ್ಞರಾದ ಡಾ.ಮಲ್ಲಿಕಾರ್ಜುನ ಗುಡ್ಡೆ, ಜಿಲ್ಲಾ ಮಾನಸಿಕ ವಿಭಾಗದ ಆಪ್ತಸಮಾಲೋಚಕರಾದ ಸಿಮಪ್ಪಾ ಸರಕೂರೆ, ವಕೀಲರಾದ ಶಿವರಾಜ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪರಶುರಾಮ, ಜ್ಯೋತಿ, ರೇಣುಕಾ. ರಾಠೋಡ್ ಪ್ರಮೋದ್, ಅಂಬಾದಾಸ, ಇಮಾನುವೇಲ್, ಶಾಮರಾವ್, ಸಂಜು ಮಲಿಗಿಕರ, ಸಂಗಮೇಶ, ಅಬ್ದುಲ್ ಹೈ, ಶರಣಬಸಪ್ಪಾ, ಜಿಲಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕುಷ್ಠರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";