ಸುರಪುರ:ತಾಲೂಕಿನ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಇಲ್ಲದೆ ಕೂಲಿಕಾರರ ಪರದಾಡುವಂತಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲೂಕ ಪಂಚಾಯತಿ ಮುಂದೆ ಸಂಘಟನೆಯಿAದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಅನೇಕ ಗ್ರಾಮ ಪಂಚಾಯತಿಗಳಲ್ಲಿ ಈ ವರ್ಷ ಕೇವಲ ೧೦ ರಿಂದ ೧೫ ದಿನಗಳು ಮಾತ್ರ ಉದ್ಯೋಗ ಖಾತ್ರಿ ಕೆಲಸ ನೀಡಿದ್ದು,ಕೆಲಸಕ್ಕಾಗಿ ಫಾರಂ ನಂಬರ್ ೬ ಸಲ್ಲಿಸಲು ಹೋದರೆ ಈ ವರ್ಷ ಜಿಲ್ಲಾ ಪಂಚಾಯತಿಯಿAದ ಕ್ರೀಯಾಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ ಬಂದ ನಂತರ ಕೆಲಸ ಕೊಡಲಾಗುವುದು ಎಂದು ಹೇಳುತ್ತಾರೆ.ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಕೂಡಲೇ ಎಲ್ಲಾ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.ಅಲ್ಲದೆ ಕಚಕನೂರ,ಆಲ್ದಾಳ,ಖಾನಾಪುರ ಎಸ್.ಹೆಚ್,ತಿಂಥಣಿ,ಪೇಠ ಅಮ್ಮಾಪುರ,ಯಕ್ತಾಪುರ,ಸೂಗೂರ,ಏವೂರ,ದೇವಾಪುರ,ಹೆಗ್ಗನದೊಡ್ಡಿ,ದೇವತ್ಕಲ್,ಕರಡಕಲ್ ಗ್ರಾಮ ಪಂಚಾಯತಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ಬರೆದ ಮನವಿ ತಾಲೂಕ ಪಂಚಾಯತಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಪ್ರಕಾಶ ಆಲ್ಹಾಳ,ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನಸೂರ,ಖಾಜಾಸಾಬ ದಳಪತಿ,ವಿರೇಶ ಪಾಳೇರ,ಮಲ್ಲೇಶಿ ಸೋಬಾನ,ಈಶಮ್ಮ ಶೆಳ್ಳಗಿ,ಬಸವರಾಜ ಏವೂರ,ಸಿದ್ದಮ್ಮ ಬೋನ್ಹಾಳ,ಹಣಮಂತ್ರಾಯ ಚಂದಲಾಪುರ,ಪ್ರಕಾಶ,ಬಸವರಾಜ ಶಾಂತಪೂರ ಸೇರಿದಂತೆ ಅನೇಕ ಜನ ಕೂಲಿಕಾರರು ಭಾಗವಹಿಸಿದ್ದರು.