ರಾಯಚೂರು,ಆ.1 : ಭಾರತ ಮಾಲಾ ಯೋಜನೆಯಡಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದ್ದು, ಈ ಹೆದ್ದಾರಿ ಹತ್ತಿರ ರೈತರು ಜಮೀನುಗಳಿಗೆ ಹೋಗಲು ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ಬಸವೇಶ್ವರ ವೃತ್ತ ದಿಂದ ಡಿಸಿ ಕಛೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೆದ್ದಾರಿ ನಿರ್ಮಾಣಕ್ದಕಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೆದ್ದಾರಿ ನಿರ್ಮಾಣ ಬಿಟ್ಟು ಉಳಿದ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದೇ ರೈತರು ತೊಂದರ ಅನುಭವಿಸುವಂತಾಗಿದೆ.
ಹೆದ್ದಾರಿ ನಿರ್ಮಾಣ ಸಂಸ್ಥೆಯೂ ಹೆದ್ದಾರಿ ಪಕ್ಕದ ಎರಡು ಬದಿಗಳಲ್ಲಿ ತಂತಿಬೇಡಿ ಹಾಘೂ ಕಂಪೌಡ್ ನಿರ್ಮಿಸಿದರಿಂದ ರೈತರ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ,ವ್ಯವಸಾಯ ಮಾಡದೆ ಜಮೀನುಗಳನ್ನು ಬೀಳು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರೈತರು ಜಮೀನುಗಳಿಗೆ ಹೋಗಲು ಬರಲು ರಸ್ತೆಗಳನ್ನು ನಿರ್ಮಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು. ಒಪ್ಪಂದ ಉಲ್ಲಂಘಿಸಿದ ಭಾರತ ಮಾಲಾ ಯೋಜನೆ ಹೆದ್ದಾರಿ ನಿರ್ಮಾಣ ಸಂಸ್ಥೆ ಮೇಲೆ ಕ್ರಮಕ್ಕೆ ಮುಂದಾಗಬೇಕೆ0ದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನರಸಿಂಹ ನಾಯಕ,ಧರ್ಮರೆಡ್ಡಿ, ಈರಣ್ಣ, ಈರಣ್ಣ ಸರ್ಜಾಪೂರ, ವೈ.ಗೋವಿಂದ ನಾಯಕ, ಶಿವಪ್ಪ ಆಲ್ಕೂರು,ಸಂಗಮೇಶ ನಾಯಕ, ಮಲ್ಲನಗೌಡ, ಜಂಗ್ಲೀ ಪೀರಸಾಬ, ನರಸಿಂಹ ರೆಡ್ಡಿ ಗಾಣದಾಳ,ವೆಂಕಟೇಶರೆಡ್ಡಿ ಗುರ್ಜಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.