ರಾಯಚೂರು,ಜೂ.25: ಸಿರವಾರ ತಾಲೂಕಿನ ಮಾಚನೂರು ನ್ಯಾಯ ಬೆಲೆ ಅಂಗಡಿ ಮಾಲೀಕ ಆಂಜೀನೆಯ್ಯ ಇವರ ಲೈಸೆನ್ಸ್ ರದ್ದುಗೊಳಿಸಿಬೇಕು ಆಹಾರ ನಿರೀಕ್ಷಕ ದೇವರಾಜಗೌಡ ಇವರನ್ನು ಸೇವೆಯಿಂದ ಅಮಾನತ್‌ಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲತಿ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಧೆ ಧರಣಿ ನಡೆಸಿದರು.
ಆಚಿಜನೇಯ್ಯ ಇವರು ಕಳೆದ 10 ತಿಂಗಳಿ0ದ ಮಾಚನೂರು ನ್ಯಾಯಬೆಲೆ ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದು, ಪಡಿತರದಾರರಿಗೆ ಸರಿಯಾಘಿ ಪಡಿತರ ವಿತರಣೆ ಮಾಡುತ್ತಿಲ್ಲ, ಪ್ರತಿಯೊಬ್ಬ ಕಾರ್ಡುದಾರರಲ್ಲಿ 10 ರೂ.ಯಿಂದ 20 ರೂ.ವಸೂಲಿ ಮಾಡಿಕೊಂಡು ತಿಂಗಳ ಕೊನೆಯ ದಿನಗಳಲಿ ಎರಡು ದಿನ ಪಡಿತರ ವಿತರಣೆ ಮಾಡುತ್ತಿದ್ದಾನೆಂದು ದೂರಿದರು.
500 ರಿಂದ 850 ಪಡಿತರ ಕಾರ್ಡಗಲು ಇದ್ದು, ಮಾಚನೂರು, ಬೊಮ್ಮನಾಳ, ಬೇವನುರು.ಕೆ,ತುಪ್ಪದೂರು ನಾಲ್ಕು ಗ್ರಾಮಗಳಿಗೆ ಪ್ರತಿ ತಿಂಗಳಲ್ಲಿ ಸುಮಾರು 30 ರಿಂದ 40 ಜನರಿಗೆ ಪಡಿತರ ಹಂಚದೆ ಪಡಿತರದಾರರಿಗೆ ಮೋಸ ಮಾಡುತ್ತಿದ್ದಾನೆಂದು ಆರೋಪಿಸಲಾಯಿತು.
ಆಂಜನೇಯ್ಯನ ಅವ್ಯವಹಾರಕ್ಕೆ ಆಹಾರ ಇಲಾಖೆ ನಿರೀಕ್ಷಕ ದೇವರಾಜಗೌಡ ಸಾಥ್ ನೀಡಿದ್ದು, ಕೂಡಲೇ ಇವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
ಪಡಿತರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಈ ಕುರಿತು ತನೆಖೆ ನಡೆಸಬೇಕು, ಹಳೆಯ ಲೈಸೆನ್ಸ್ದಾರರಾದ ಮಲ್ಲನಗೌಡ ಹೊಕ್ರಾಣಿ ಇವರ ನಾಲ್ಕು ಗ್ರಾಮಗಳ ಜನರಿಗೆ ಸರಿಯಾಗಿ ಪಡಿತರ ವಿತರಣೆ ಮಾಡುತ್ತಿದ್ದರು. ಮಲ್ಲನಗೌಡ ಇವರ ಲೈಸೆನ್ಸ್ಗೆ ಮಾಚನೂರು ಗ್ರಾಮ ವಹಿಸಿಕೊಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಬಿ.ಮಾರೆಪ್ಪ, ಹೋಬಳಿ ಸಂಚಾಲಕ ಬಾಲಪ್ಪ, ಟಿ.ಎಸ್.ಮಾರೆಪ್ಪ ತುಪ್ಪದೂರು, ಕೆ.ನಾಗರಾಜ ಬೊಮ್ಮಾನಾಳ, ಪರಮೇಶ ಮಾಚನೂರು, ಚನ್ನ ಬಸವ ಮಾಚನೂರು, ಬಸವರಾಜ್, ವಿಜಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಾಚನೂರು ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದಿಗೆ ಒತ್ತಾಯಿಸಿ ಧರಣಿ
