ಸಿರುಗುಪ್ಪ.ಜೂ.೨೪:- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಗರದ ಗಾಂಧಿವೃತ್ತದಲ್ಲಿ ಬಿ.ಜೆ.ಪಿ. ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಾಜಿ ಶಾಸಕ ಎಂ.ಎಸ್.ಸೋಮಲಿAಗಪ್ಪ ಮಾತನಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಧರ ಹೆಚ್ಚುಮಾಡುತ್ತಿದೆ. ಅದರಲ್ಲೂ ದಿನನಿತ್ಯ ಬಳಕೆ ಮಾಡುವ ಪೆಟ್ರೋಲ್, ಡೀಸೆಲ್ ಧರ ಹೆಚ್ಚಳ, ಎಲ್ಲದರ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಪೆಟ್ರೂಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ, ಸರ್ಕಾರ ಇದೇ ರೀತಿ ಮುಂದುವರೆಸಿದರೆ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಬಿ.ಜೆ.ಪಿ. ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಪೆಟ್ರೋಲ್ ಧರ ಏರಿಕೆಯಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಸರಿಯಾದುದ್ದಲ್ಲ, ನೆರೆರಾಜ್ಯವಾದ ಗೋವಾದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರದಲ್ಲಿದೆ ಅಲ್ಲಿ ಕರ್ನಾಟಕಕ್ಕಿಂತ ಪೆಟ್ರೋಲ್ ಧರ ರೂ.೯ ಕಡಿಮೆಯಿದೆ, ಇದಕ್ಕೆ ಸಿದ್ದರಾಮಯ್ಯ ಅವರ ಬಳಿ ಉತ್ತರ ಇದೆಯೇ ಎಂದು ಪ್ರಶ್ನೆ ಮಾಡಿದ ಅವರು ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಗ್ಯಾರಂಟಿ ಮುಂದು ವರಿಸಲು ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಭ್ರಹ್ಮಾಸ್ತçವನ್ನು ಬಿಟ್ಟಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬಿ.ಜೆ.ಪಿ. ತಾ.ಅಧ್ಯಕ್ಷ ಹೆಚ್.ಎಂ.ಮಲ್ಲಿಕಾರ್ಜುನ ಮಾತನಾಡಿದರು. ಮುಖಂಡರಾದ ಮೇಕೆಲಿ ವೀರೇಶ,, ಹೆಚ್.ಬಿ.ಗಂಗಪ್ಪ, ಮಾರೆಪ್ಪ, ಮುರಳಿಮೋಹನ್‌ರೆಡ್ಡಿ, ಚಿರಂಜೀವಿರೆಡ್ಡಿ, ಧರಪ್ಪನಾಯಕ, ಉಡೇಗೋಳ ಖಾಜಪ್ಪ, ಕುಮಾರ, ಬಸವರಾಜ, ಗಾದಿಲಿಂಗ, ಮಲ್ಲಿಕಾರ್ಜುನ ಆಚಾರಿ, ಗಂಗಾಧರ, ಮಹಾದೇವ, ವೈ.ಡಿ.ವೆಂಕಟೇಶ, ಮಂಜುನಾಥಗೌಡ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.