ಸಿಂಧನೂರು.ಆ.13: ಬರಗಾಲದ ರಜಾ ಅವಧಿಯಲ್ಲಿ ಅಡುಗೆ ಕೆಲಸ ಮಾಡಿದ ಸಂಭಾವನೆವನ್ನು ತಕ್ಷಣ ನೀಡಬೇಕು. ಪಡಿತರ ವಿತರಣೆ ಸಮಯದಲ್ಲಿ ನೀಡದೇ ಇರುವ ಬೇಳೆ, ಎಣ್ಣೆ, ಖರೀದಿಸಿದ ಹಣವು ಪಾವತಿಸಬೇಕೆಂದು ಅಕ್ಷರ ದಾಸೋಹದ ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷ ಶೇಕ್ಷಖಾದ್ರಿ ಒತ್ತಾಯಿಸಿದರು. ನಗರದ ಪುಟ್ಟರಾಜ ಗವಾಯಿಗಳ ಉದ್ಯಾನವನದಿಂದ ಅಕ್ಷರ ದಾಸೋಹ ಬಿಸಿಯೂಟ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ಮೂಲಕ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಬಿಸಿಯೂಟ ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ವಿಷಯದ ಕುರಿತು ಈಗಾಗಲೇ ಸಂಬ0ಧಪಟ್ಟ ಅಧಿಕಾರಿಗಳಿಗೆ ಹಲವಾರು ಸಲ ಮನವಿ ಪತ್ರದ ಮೂಲಕ ಹಾಗೂ ಮೌಖಿಕವಾಗಿ ತಿಳಿಸಿದರು ಯಾವುದೇ ಪ್ರಯೋಜನವಾಗಿರುವುದಿಲ್ಲ.
ಬೇಸಿಗೆ ಕಾಲದಲ್ಲಿ ಅಡುಗೆ ಮಾಡಿದ ಸಿಬ್ಬಂದಿಗಳಿಗೆ ನೀಡಬೇಕಾದ ಸಂಬಳವನ್ನು ಇದುವರೆಗೂ ನೀಡಿರುವುದಿಲ್ಲ. ಬ್ಯಾಂಕ್ ಖಾತೆ ನಿರ್ವಹಣೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಮುಖ್ಯ ಗುರುಗಳ ಬದಲಾಗಿ, ಮುಖ್ಯ ಗುರುಗಳು ಹಾಗೂ ಮುಖ್ಯ ಅಡುಗೆಯವರಿಗೆ ಜವಾಬ್ದಾರಿ ನೀಡಲು ಮಧ್ಯಾಂತರ ಆದೇಶ ಬಂದರೂ ಖಾತೆ ಬದಲಾವಣೆ ಮಾಡಲು ಕ್ರಮ ಜರುಗಿಸಿರುವುದಿಲ್ಲ. ಪಡಿತರವನ್ನು ಸರಿಯಾದ ಸಮಯಕ್ಕೆ ನೀಡಿರುವುದಿಲ್ಲ ಎಂದರು.
ಕಡಿಮೆ ನೀಡುವ ಅಡುಗೆ ಎಣ್ಣೆಯನ್ನು ಅಡುಗೆ ಸಿಬ್ಬಂದಿಯವರೆ ತಂದು ನಂತರ ನೀಡುವ ಎಣ್ಣೆಗೆ ಸರಿಪಡಿಸಲು ತಿಳಿಸುತ್ತಾರೆ. ಕೆಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಹಾಗೂ ಮುಖ್ಯ ಗುರುಗಳು ಮತ್ತು ಕೆಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಹಾಗೂ ಮುಖ್ಯ ಗುರುಗಳು ಸಹ ಶಿಕ್ಷಕರು ವಿನಾ ಕಾರಣ ಕಿರುಕುಳ ನೀಡುತ್ತಾತೆಂದು ಆರೋಪಿಸಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾದಿಲ್ವಾರು ಹಣ ಪಾವತಿ ಮಾಡಬೇಕು. ಹಿಂದಿನAತೆ ಬ್ಯಾಂಕ್ ನಲ್ಲಿ ಮುಖ್ಯ ಗುರುಗಳು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆ ಮಾಡಿಸಬೇಕು ಎಂದಿನAತೆ ಬಾಳೆ ಹಣ್ಣು ಹಾಗೂ ಮೊಟ್ಟೆಯ ಹಣವನ್ನು ಮುಖ್ಯ ಅಡುಗೆಯವರ ಖಾತೆಗೆ ಚೆಕ್ ನೀಡಬೇಕು. ಎಲ್.ಕೆಜಿ, ಯುಕೆಜಿ ಮಕ್ಕಳಿಗೆ ನೀಡುವ ಊಟದ ಹಾಜುರಾತಿ ನೀಡಬೇಕು. ಒಂದುವೇಳೆ ಮಕ್ಕಳು ಅದೇ ಶಾಲೆಯಲ್ಲಿ ಇದ್ದರೆ ಮಾತ್ರ ಬಿಸಿಯೂಟ ನೀಡಬೇಕೆಂದು ಹೀಗೆ ೮ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಿಸಿಯೂಟ ನೌಕರರು ಒತ್ತಾಯಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್ ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ರೇಣುಕಮ್ಮ, ತಾಲೂಕು ಅಧ್ಯಕ್ಷೆ ವಿಶಲಾಕ್ಷಮ್ಮ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಹಾಗೂ ಶ್ರೀದೇವಿ, ಬಸಮ್ಮ, ರುಕ್ಷಾನ ಬೇಗಂ, ಯಲ್ಲಮ್ಮ, ಶಿವಮ್ಮ, ರಾಜೇಶ್ವರಿ, ಸೌಭಾಗ್ಯಮ್ಮ, ಮುತ್ತಮ್ಮ, ಮಂಜುಳಾ, ಶುಭಾ, ಸೇರಿದಂತೆ ನೂರಾರು ಬಿಸಿಯೂಟ ನೌಕರರಿದ್ದರು.