ರಾಯಚೂರು,ಜು.19 : ನಗರದ ದರ್ವೇಶ ಗ್ರೂಪ್ ಕಂಪನಿಯಲ್ಲಿ ನಗರ ಸೇರಿದಂತೆ ಜಿಲ್ಲೆಯ ನೂರಾರು ಜನ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದು, ಕಂಪನಿಯ ಮಾಲೀಕರು ಗ್ರಾಹಕರಿಗೆ ವಂಚನೆ ಮಾಡಿ ಪರಾರಿಯಾಗಿದ್ದು, ಮಾಲೀಕರ ಮೇಲೆ ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ದರ್ವೇಶ ಗ್ರೂಪ್ ಕಂಪನಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ಮಾರ್ಕೇಟ್ ಯಾರ್ಡ ಪೊಲೀಸ್ ಠಾಣೆ ಅರಕ್ಷಕ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಿ, ದರ್ವೇಶ ಗ್ರೂಪ್ ಕಂಪನಿ 100ಕ್ಕೆ ಶೇ 12 ರಿಂದ 15 ರಷ್ಡು ಬಡ್ಡಿ ನೀಡುವುದಾಗಿ ಜನರಿಗೆ ನಂಬಿಸಿ ಜನರಿಂದ ಕೋಟ್ಯಾಂತರ ರೂ. ಹೂಡಿಕೆ ಮಾಡಿಕೊಂಡಿದೆ. ದರ್ವೇಸ ಕಂಪನಿಯಲ್ಲಿ ಸಾವಿರಾರು ಬಡ ಕುಟುಂಬದ ಜನರು ಸಾಲ ಮಾಡಿ, ಆಭರಣಗಳು ಮಾರಾಟ ಮಾಡಿ, ಹೆಚ್ಚಿನ ಬಡ್ಡಿ ಆಸೆಗೆ ಹೂಡಿಕೆ ಮಾಡಿದ್ದಾರೆ.
ನಂತರ ಗ್ರಾಹಕರಿಗೆ ಹಣ ನೀಡದೆ ಕಂಪನಿ ಮಾಲೀಕರಾದ ಮಹ್ಮದ್ ಹುಸೇನ್ ಶುಜ ಹಾಗೂ ಬಬ್ಲೂ ಇವರು ಜನರಿಗೆ ವಂಚಿಸಿ ಪರಾರಿಯಾಗಿದ್ದು, ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದರ್ವೇಶ ಗ್ರೂಪ್ ಕಂಪನಿಯ ಏಜೆಂಟ್‌ರು ತಮ್ಮಗೆ ಬೇಕಾದವರಿಗೆ ಮಾತ್ರ ಹಾಗೂ ತೀವರ ಆರೋಗ್ಯ ಸಮಸ್ಯೆ ಇದ್ದವರಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಿದ್ದಾರೆ. ಇತ್ತೀಚಿಗೆ ಏಜೆಂಟರೂ ಸಹ ಕಾಣಯಾಗಿದ್ದರೆಂದು ದೂರಿದರು.
ಹಣ ಹೂಡಿಕೆ ಮಾಡಿದ ಗ್ರಾಹಕರು ದೂರು ನೀಡಿದರೆ ಹಣ ನೀಡುವುದಿಲ್ಲವೆಂದು ಬೆದರಿಕೆ ಹಾಕುತ್ತಿದ್ದಾರೆ. ಈ ಕಾರಣ ದಿಂದ ಹೂಡಿಕೆದಾರರು ದೂರು ನೀಡಲು ಮುಂದೆ ಬರುತ್ತಿಲ್ಲವೆಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಎಸ್‌ಪಿ ಸತ್ಯ ನಾರಾಯಣ ಅವರು ಪ್ರತಿಕ್ರಿಯಿಸಿ ದರ್ವೇಶ ಗ್ರೂಪ್ ಕಂಪನಿಯಲ್ಲಿ ಹಣ ಹೂಡಿದ ಗ್ರಾಹಕರು ಬಂದು ಸ್ವಯಂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೂರು ದಾಖಲಾದರೆ ಆರೋಪಿಗಳನ್ನು ಬಂಧಿಸುವುದು ನಮ್ಮ ಕರ್ತವ್ಯವೆಂದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪಟ್ಟಿ, ಮಹೇಶ ಕುಮಾರ,ಈ. ಕುಮಾರ ಸ್ವಾಮಿ, ಕೆ.ಸಂತೋಷ, ಚಂದ್ರಶೇಖರ, ಗಂಗಾಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.