ಮಸ್ಕಿ: ಪಟ್ಟಣದ ಗಾಂಧಿನಗರದಲ್ಲಿ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿ ರವಿವಾರ ಬೆಳಿಗ್ಗೆ ಮತಯಾಚನೆ ಮಾಡಿದರು. ಬಿಜೆಪಿ ಹಿರಿಯ ಮುಖಂಡ ಶಿವಪ್ಪ ಮಸ್ಕಿ ಮಾತನಾಡಿ ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಮೋದಿಯವರ ಅಲೆ ಇದೆ. ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದ್ದು ಡಾ. ಬಸವರಾಜ ಕ್ಯಾವಟರ್ ಸಜ್ಜನ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಡಾ. ಬಸವರಾಜ ಕ್ಯಾವಟರ್ ಅವರನ್ನು ಬೆಂಬಲಿಸಿ ಮತ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿದ್ದಪ್ಪ ಬಸವರೆಡ್ಡಿ, ಡಾ.ದಿವಟರ್, ದೊಡ್ಡಪ್ಪ ಬುಳ್ಳಾ, ಯಲ್ಲೋಜಿರಾವ್ ಕೋರೆಕರ, ಡಾ. ಮಲ್ಲಿಕಾರ್ಜುನ ಇತ್ಲಿ, ಶಿವಪ್ರಸಾದ ಕ್ಯಾತನಟ್ಟಿ, ಡಾ. ಸಂತೋಷ, ಡಾ. ಮಲ್ಲಿಕಾರ್ಜುನ, ಶಿವರಾಜ ಪಾಟೀಲ, ಹುಲಿಗೇಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.