WhatsApp Group
Join Now
ರಾಯಚೂರು: ಮೇ-೪: ಜಿ.ಪಂ.ಮಾಜಿ ಸದಸ್ಯ ಬಶೀರುದ್ದೀನ್ ಅವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರೆ, ಪೊಲೀಸರು ಬೂಟ್‌ನಿಂದ ಹೊಡದು ಒಳಗೆ ಹಾಕಬೇಕು ಎಂದು ಹೇಳಿರುವ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಕೂಲಂಕುಶವಾಗಿ ಪರಿಶೀಲಿಸಿದಾಗ ಈ ರೀತಿ ಹೇಳಿರುವುದು ಕಂಡು ಬಂದಿರುವುದಿಲ್ಲವೆAದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಈ ವಿಡಿಯೋ ದಿ.೩೦-೧೧-೨೦೨೩ರಂದು ಚಿತ್ರೀಕರಣವಾದ ಘಟನೆ ಆಗಿರುತ್ತದೆ. ಹರಿದಾಡುತ್ತಿರುವ ವಿಡಿಯೋ ಪೂರ್ತಿ ಘಟನೆಯ ವೀಡಿಯೋ ಆಗಿರದೆ, ಕೇವಲ ಘಟನೆಯ ತುಣುಕುಗಳು ಆಗಿರುತ್ತವೆ. ಆದರಿಂದ ಸಾರ್ವಜನಿಕರು ಈ ವಿಷಯದಲ್ಲಿ ಸಾಮರಸ್ಯ ಕಾಪಾಡಬೇಕೆಂದು ಅವರು ಕೋರಿದ್ದಾರೆ.