ರಾಯಚೂರು: ನಗರದ ಬಶವೇಶ್ವರ ವೃತ ದಿಂದ ಗಾಂಧಿ ವೃತ್ತದ ವರೆಗೆ ಕಾರ್ಯಚರಣೆ ಮಾಡಿದ ಪೊಲೀಸರು ರಸ್ತೆ ಬದಿಯ ಅಂಗಡಿಗಳ ಮುಂದೆ ಪಾದಚಾರಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ ವಾಹನ ಮತ್ತು ಅಂಗಡಿ ಮಾಲೀಕರಿಗೆ ದಂಡೆ ವಿಧಿಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ರಸ್ತೆಯ ಎರಡು ಬದಿಯಲ್ಲಿ ದ್ವೀಚಕ್ರವಾಹನಗಳ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆ ಉಂಟಾಗಿ ಅಪಘಾತಗಳು ಸಂಭಿವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸದರ ಬಜಾರ್ ಸಿಪಿಐ ಉಮೇಶ ಕಾಂಬ್ಳೆ ಹಾಗೂ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ವೆಂಕಟೇಶ ಮತ್ತು ಸಿಬ್ಬಂದಿ ಈ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.