ಸಿರುಗುಪ್ಪ.ಮೇ.೧೪:- ಭಗೀರಥ ಜಯಂತಿ ಕಾರ್ಯಕ್ರಮವನ್ನು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಚರಿಸದಿರುವ ಬಗ್ಗೆ ತಾಲೂಕು ಉಪ್ಪಾರ ಸಮಾಜದ ಮುಖಂಡರು ತಹಶೀಲ್ದಾರ್ ಶಂಷಾಲA ಮತ್ತು ಬಿ.ಸಿ.ಎಂ. ಅಧಿಕಾರಿ ಗಾದಿಲಿಂಗಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರದ ತಾಲೂಕು ಕಛೇರಿಯಲ್ಲಿ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಗಿರಥ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು. ಈ ವರ್ಷವೂ ತಾ.ಪಂ.ಕಛೇರಿಯ ಸಭಾಂಗಣದಲ್ಲಿ ಭಗಿರಥ ಜಯಂತಿ ಆಚರಣೆ ನಡೆಯುತ್ತಿದೆ ಎಂದು ಉಪ್ಪಾರ ಸಮಾಜದ ಮುಖಂಡರು ತಾಲೂಕು ಪಂಚಾಯಿತಿ ಸಭಾಂಗಣಕ್ಕೆ ತೆರಳಿದಾಗ ಯಾವ ಅಧಿಕಾರಿಯೂ ಅಲ್ಲಿ ಇರಲಿಲ್ಲ, ಇದನ್ನು ತಹಶೀಲ್ದಾರರನ್ನು ಕೇಳಲು ತೆರಳಿದಾಗ ಕಛೇರಿಯಲ್ಲಿ ತಹಶೀಲ್ದಾರರು ಇರಲಿಲ್ಲ, ಆದರೆ ಬಿ.ಸಿ.ಎಂ. ಇಲಾಖೆ ಅಧಿಕಾರಿ ಗಾದಿಲಿಂಗಪ್ಪ ಅವರನ್ನು ಪ್ರಶ್ನೆ ಮಾಡಿದಾಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಯಂತಿ ಆಚರಣೆ ಅದ್ದೂರಿಯಾಗಿ ಮಾಡುವ ಹಾಗಿಲ್ಲ, ತಾಲೂಕು ಕಛೇರಿಯಲ್ಲಿ ಭಗಿರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ತಹಶೀಲ್ದಾರರು ತಿಳಿಸಿದ್ದಾರೆ, ಅದರಂತೆ ತಾಲೂಕು ಕಛೇರಿಯಲ್ಲಿ ಸರಳವಾಗಿ ಭಗೀರಥ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಮಾಜದ ಮುಖಂಡ ಹನುಮಂತಪ್ಪ ಮಾತನಾಡಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅನೇಕ ಮಹನೀಯರ ಜಯಂತಿಗಳು ತಾ.ಪಂ.ಸಭಾAಗಣದಲ್ಲಿ ನಡೆಸುತ್ತಾ ಬಂದಿದ್ದಾರೆ. ಆದರೆ ನಮ್ಮ ಭಗೀರಥರ ಜಯಂತಿಯನ್ನು ತಾಲೂಕು ಕಛೇರಿಯ ಚಿಕ್ಕ ಕೊಠಡಿಯಲ್ಲಿ ಆಚರಣೆ ಮಾಡುವ ಉದ್ದೇಶ ನಮ್ಮನ್ನು ಅಧಿಕಾರಿಗಳು ಅವಮಾನ ಮಾಡುವುದಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ವಿವಿಧ ಗ್ರಾಮಗಳ ಉಪ್ಪಾರ ಸಮಾಜದ ಮುಖಂಡರು ಇದ್ದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭಗೀರಥರ ಜಯಂತಿಯನ್ನು ತಾಲೂಕು ಕಛೇರಿಯಲ್ಲಿ ಆಚರಿಸುವಂತೆ ತಹಶೀಲ್ದಾರರು ಸೂಚನೆ ನೀಡಿದ್ದರು. ಅವರ ಸೂಚನೆ ಪ್ರಕಾರ ತಾಲೂಕು ಕಛೇರಿಯಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ ಎಂದು ಬಿ.ಸಿ.ಎಂ. ಅಧಿಕಾರಿ ಗಾದಿಲಿಂಗಪ್ಪ ತಿಳಿಸಿದ್ದಾರೆ.
ನಗರದಲ್ಲಿ ಅಧಿಕಾರಿಗಳ ವಿರುದ್ಧ ಉಪ್ಪಾರ ಸಮಾಜದ ಮುಖಂಡರ ಆಕ್ರೋಶ:
WhatsApp Group
Join Now