ಒಂದುವರೆ ರ‍್ಷದ ಮಗು ಅಪಹರಣ ಸುಕಾoತ್ಯ: ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Eshanya Times

ಬೀದರ. ಮೇ.೦೭ : ಮೇ ೪ ರಂದು ನಗರದ ನಯಾಕಮಾನ್ ಬಳಿ‌ ನಡೆದಿದ್ದ ಒಂದೂವರೆ ರ‍್ಷದ ಮಗು ಅಹಪಹರಣ ಪ್ರಕರಣ ಸುಖಾಂತ್ಯವಾಗಿದೆ.
ಉತ್ತರ ಪ್ರದೇಶ ಮೂಲದ ದಂಪತಿಯ ಮಗು ಅವರು ಕೆಲಸ ಮಾಡುತ್ತಿದ್ದ ಸ್ಥಳದ ಸಮೀಪ ಆಟವಾಡುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಮಗುವನ್ನು ಅಪಹರಿಸಿದ್ದರು.
ಇದು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ‌ ಎಸ್.ಪಿ. ಚೆನ್ನಬಸವಣ್ಣ ಡಿವೈಎಸ್ಪಿ‌ ನೇತೃತ್ವದಲ್ಲಿನ ೩೦ ಜನರ ತಂಡ‌ ರಚನೆ ಮಾಡಿದ್ದರು.
ಸತತ ತನಿಖೆ ನಡೆಸಿ ಅಪಹರಣ ಮಾಡಿದ್ದ ಮಹಿಳೆ‌ ಮತ್ತು ಮಗುವನ್ನು ಹೈದರಾಬಾದ್ ಸಮೀಪದ‌ ಪಟನಚೂರ್ ಬಳಿ‌ ಪತ್ತೆಯಾಗಿದೆ. ಮಂಗಳವಾರ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿ ಮಹಿಳೆಯನ್ನು ಸೆರೆ ಹಿಡಿದಿದ್ದಾರೆ.
ಎಸ್.ಪಿ ಚನ್ನಬಸಣ್ಣ ಅವರು ಮಗುವನ್ನು ಪಾಲಕರಿಗೆ ಹಸ್ತಾಂತರಿಸಿದ್ದಾರೆ. ಮಗು‌ ಅಪಹರಣ ಹಿಂದಿನ‌ ಉದ್ದೇಶ ಇನ್ನಷ್ಟೇ‌ ಗೊತ್ತಾಗಬೇಕಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್.ಪಿ ನೀಡಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";