ರಾಯಚೂರು,ಆ.24: ವೇಶ್ಯವಾಟಿಕ ವೃತ್ತಿಗೆ ತಳ್ಳಲಪಟ್ಟಿರುವ ಮಹಿಳೆಯರ ರಕ್ಷಣೆಗೆ ಕಾನೂನಿನ ನೆರವು ದೊರೆಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಎಚ್.ಎನ್.ಸಾತ್ವಿಕ್ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಉತ್ತರ ಕರ್ನಾಟಕ ಮಹಿಳಾ ಒಕ್ಕೂಟ, ನ್ಯಾಷನಲ್ ನೆಟ್‌ವರ್ಕ ಆಫ್ ಸೆಕ್ಸ್ ವರ್ಕ್ಸಸ್, ಸಂಗ್ರಾಮ ಮತ್ತು ಬೆಳದಿಂಗಳು ಮಹಿಳಾ ಒಕ್ಕೂಟ ಸಹಯೋಗದಲ್ಲಿ ಆಯೋಜಿಸಿದ ಜಿಲ್ಲಾ ವಕಾಲತ್ತು ಸಭೆ ಉದ್ಘಾಟಿಸಿ ಮಾತನಾಡಿ, ವೇಶ್ಯವಾಟಿಕೆ ಕಾನೂನಾತ್ಮಕವಾಗಿ ಅವಕಾಸವಿದೆ. ಆದರೆ ಮಹಿಳೆಯರ ಇಚ್ಚೆಗೆ ವಿರುದ್ದವಾಗಿ ತಳ್ಳಿದರೆ ಅಪರಾಧವಾಗುತ್ತದೆ. ಅಂತಹವರನ್ನು ಬಂಧಿಸಲು ಕಾನೂನಿನ್ಲಿ ಅವಕಾಶವಿದೆ. ವೇಶ್ಯವಾಟಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಸಂವಿಧಾನದಲ್ಲಿ ಹಕ್ಕುಗಳು ಇವೆ. ಉಲ್ಲಂಘನೆಯಾದಲ್ಲಿ ತೊಡಗಕುಗಳಾದರೆ ಜಿಲ್ಲಾ ಮತ್ತು ತಾಲೂಕ ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ. ವೇಶ್ಯವಾಟಿಕೆ ಹೆಸರಿನಲ್ಲಿ ಮಹಿಳೆಯರ ಶೋಷಣೆ ತಡೆಯುವದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.
ಡಿವೈಎಸ್‌ಪಿ ಸತ್ಯನಾರಾಯಣ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ಸ್ವಯಿಚ್ಚೆಯಿಂದ ವೈಶ್ಯವಾಟಿಕೆ ತೊಡಗಿರುವುದಿಲ್ಲ, ಅವರ ನೋವು, ಸಂಕಷ್ಟಗಳಿAದ ತಳ್ಳಲಪಟ್ಟಿರುತ್ತಾರೆ. ಸಮಾಜ ಅಂತವರನ್ನು ನೋಡುವ ದೃಷ್ಠಿಯೇ ಬೇರೆಯಾಗಿರುತ್ತದೆ. ಕಾರಣ ಶೋಷಣೆಗೆ ಒಳಗಾದ ಮಹಿಳೆಯರನ್ನು ರಕ್ಷಿಸಬೇಕಿದೆ. ಅವರಿಗೂ ಸೌಲಭ್ಯ, ಸೌಕರ್ಯ ಒದಗಿಸಬೇಕಾಗಿದೆ ಎಂದರು.
ನ್ಯಾಯವಾದಿ ದೊಡ್ಡಪ್ಪ ಲೈಂಗಿಕ ಶೋಷಣೆಗೆ ಒಳಗಾಗುವ ಮಹಿಳೆಯರ ಹಕ್ಕುಗಳು ಮತ್ತು ಕಾನೂನಿನ ರಕ್ಷಣೆ ಕುರಿತು ಮಾಹಿತಿ ಒದಗಿಸಿದರು. ವೇದಿಕೆ ಮೇಲೆ ಡಾ. ನಾಸೀರ್, ಮುಕ್ತಾ ಪೂಜಾರ, ವಂದನಾ, ಹುಲಿಗೆಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವೇಶ್ಯವಾಟಿಕೆ ವೃತ್ತಿಗೆ ತಳ್ಳಲು ಪಟ್ಟಿರುವರ ಮಹಿಳೆಯರ ರಕ್ಷಣೆಗೆ ಕಾನೂನು ನೆರವು-ನ್ಯಾ.ಸಾತ್ವಿಕ್
