ರಾಯಚೂರು,ಆ.15: ದೇಶದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಆರ್‌ಟಿಪಿಎಸ್ ಮುಂಚಣೆಯಲ್ಲಿದೆ 2023-24ನೇ ಸಾಲಿನಲ್ಲಿ 22313 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಈ ವರ್ಷದ ಎಪ್ರಿಲ್, ಮೇ,ಜೂನ್, ಮೂರು ತಿಂಗಳಲ್ಲಿ 60 ಸಾವಿರ 12 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ ಬಾಬು ಹೇಳಿದರು.
ಕೆಪಿಸಿಎಲ್, ಡಿಎವಿ ಸ್ಕೂಲ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿಯಲ್ಲಿ ಮೊದಲ ಬಾರಿಗೆ ಶಕ್ತಿನಗರದ ಹೆಲಿಪ್ಯಾಡ್ ಮೈದಾನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಆಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹರಣ ನೇರವೇರಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಡಿಎ ವಿ ಸ್ಕೂಲ್, ಆರ್ ಟಿಪಿಎಸ್ ನ ಆಗ್ನಿಶಾಮಕ ದಳದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ,ಮಹಾತ್ಮ ಗಾಂಧಿಜೀ, ಜವಾಹರಲಾಲ್ ನೆಹರು, ಸುಭಾಷ ಚಂದ್ರ ಭೋಸ್, ಭಗತ್ ಸಿಂಗ್, ಡಾ.ಬಿ.ಆರ್ ಅಂಬೇಡ್ಕರ್, ಮುಂತಾದ ಮಹಾನೀಯರ ಅಚಲ ದೇಶಭಕ್ತಿ, ತ್ಯಾಗ, ಪರಿಶ್ರಮದಿಂದಾಗಿ ಸ್ವಾತಂತ್ರ‍್ಯವನ್ನು ಪಡೆದಿದ್ದೇವೆ ಎಂದರು.
ಇಂದು ನಾವು ಅನುಭವಿಸುತ್ತಿರುವ, ಸ್ವಾತಂತ್ರ‍್ಯವನ್ನು ಪಡೆಯಲು ಅದೆಷ್ಟೋ ನಮ್ಮ ಹಿರಿಯರು ಜೀವನವನ್ನು ತ್ಯಜಿಸಿ, ಸ್ವಾತಂತ್ರ‍್ಯ ಸಂಗ್ರಾಮದ ಸಮಯದಲ್ಲಿ ತಮ್ಮೆಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಸಮರ್ಪಣ ಭಾವದಿಂದ ಭಾರತಮಾತೆಯ ದಾಸ್ಯದ ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆಗಳು, ಇಂದಿನ ತಲೆಮಾರಿಗೆ ದಾರಿದೀಪವಾಗಿದೆ ಅಂದು ಬ್ರಿಟೀಷರು, ಪೊರ್ಚಗೀಸರು ಡಚ್ಚರು ಸೇರಿದಂತೆ ಹಲವರು ಸುಮಾರು ಮೂರುನೂರುವರ್ಷಗಳ ಕಾಲ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಾ ನಮ್ಮನ್ನು ತಮ್ಮ ಕೈಯಾಳು ಮಾಡಿಕೊಂಡು ನಮ್ಮನ್ನು ಆಳುತ್ತಿರುವಾಗ ಅವರ ದಬ್ಬಾಳಿಕೆ, ಶೋಷಣೆ ವಿರೋಧಿಸಿ ನಮ್ಮದೇಶದ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನದ ಪ್ರತೀಕ ಇಂದು ನಾವೆಲ್ಲಾ ಸ್ವತಂತ್ರವನ್ನು ಅನುಭವಿಸುತ್ತಿದ್ದೆವೆ ಎಂದರು.
ನ0ತರ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ CISF ತಂಡ ಉಗ್ರರನ್ನು ಸೆರೆಹಿಡಿಯುವ, ದೇಶ ರಕ್ಷಣೆಗೆ ತುಕಡಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು ಮತ್ತು ಡಿಎವಿ ಶಾಲೆಯ ಮಕ್ಕಳು ದೇಶಭಕ್ತಿ ಗೀತೆ, ಹಾಡು, ನೃತ್ಯ ಗಳ ಮೂಲಕ ಪಿರಾಮಿಡ್ ಆಕೃತಿಯನ್ನು ಸಂಗೀತ ನೃತ್ಯವನ್ನ ತಮ್ಮ ಶಿಕ್ಷಕ ಪಾಲಕರ ಮುಂದೆ ಉತ್ತಮ ರೀತಿಯಲ್ಲಿ ಪ್ರದರ್ಶಿಸಿ ಅತ್ಯುತ್ಸಹ ಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ರೆಹನಾ ಸುಲ್ತಾನ ಎಲ್ಲರನ್ನು ಸ್ವಾಗತಿಸಿದರು
ಅಚ್ಚುಕಟ್ಟಾಗಿ ಕನ್ನಡದಲ್ಲಿ ಶಿಕ್ಷಕಿ ಪದ್ಮಿನಿ, ಆಂಗ್ಲ ಭಾಷೆಯಲ್ಲಿ ಶಿಕ್ಷಕಿ ಮಂಗಳದೇವಿ ಸುಂದರವಾಗಿ ನಿರೂಪಿಸಿದರು.
ಈ ಸಂದರ್ಭದಲ್ಲಿ ವೈ ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ , CISF ಕಮಾಂಡೆ0ಟ್ ಸಂತೋಷ ಕುಮಾರ ಪಾಸ್ವಾನ್, ಕಾರ್ಯನಿರ್ವಹಣಾಧಿಕಾರಿ ನಾರಾಯಣ ರಾವ್ , ಮುಖ್ಯ ಅಭಿಯಂತರರು ಗಂಗಾಧರ್, ಸೇರಿದಂತೆ ಕೆಪಿಸಿಎಲ್ ಆರ್ಟಿಪಿಎಸ್, ವೈ ಟಿ ಪಿ ಎಸ್ ನ ಎಲ್ಲ ಸಿಬ್ಬಂದಿಗಳು ಹಾಗೂ ಕೆಪಿಸಿಎಲ್ ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು , ಡಿಎವಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.